ಪಾಂಡವರು ಪಗಡೆ ಆಟಕ್ಕೆ ದ್ರೌಪದಿಯನ್ನೇ ಪಣವಾಗಿಟ್ಟು ಸೋತ ನಂತರ ಮಾಹಾಭಾರತ ಯುದ್ದವೆ ನಡೆಯಿತು. ಅದು ದ್ವಾಪರಯುಗದ ಕಥೆ. ಈ ಕಲಿಯುಗದಲ್ಲೂ ಜೂಜಾಟದಲ್ಲಿ ತನ್ನ ಪತ್ನಿಯನ್ನೇ ಪಣವಾಗಿಟ್ಟ ಪತಿರಾಯ, ಜೂಜಿನಲ್ಲಿ ಸೋತ ನಂತರ ಪತ್ನಿಯನ್ನು ಬಲವಂತವಾಗಿ ಗೆಳೆಯರಿಗೆ ಸಮರ್ಪಿಸಿ ಬಂದಿದ್ದಾನೆ
ಇದು ಒಂದು ತಿಂಗಳು ಹಿಂದೆ
ಬಿಹಾರದ ಭಾಗಲ್ಪುರದ ಹಸಂಗಂಜ್ ನಡೆದ ಘಟನೆ. ಈಗ ಬಹಿರಂಗವಾಗಿದೆ.
ಗ್ರಾಮದಲ್ಲಿನ ವ್ಯಕ್ತಿಯೊಬ್ಬ ಸ್ನೇಹಿತ ರೊಂದಿಗೆ ಜೂಜಾಟಕ್ಕೆ ಇಳಿದಿದ್ದಾನೆ. ಹಣವೆಲ್ಲಾ ಖಾಲಿಯಾಯಿತು. ಜೂಜಾಟಕ್ಕೆ ಏನೂ ಇಲ್ಲದೇ ಇದ್ದಾಗ ಪಾಂಡವರ ರೀತಿಯಲ್ಲಿ ಪತ್ನಿಯ ಅನುಮತಿ ಇಲ್ಲದೇ ಹೋದರೂ ತನ್ನ ಪತ್ನಿಯನ್ನೇ ಆತ ಪಣಕ್ಕೆ ಇಟ್ಟಿದ್ದಾನೆ. ಜೂಜಾಟದಲ್ಲಿ ಗೆಲ್ನುತ್ತೇನೆ ಎಂಬ ನಿರೀಕ್ಷೆಯಲ್ಲಿದ್ದವನಿಗೆ ಸೋಲಿನ ಕಹಿ ತಟ್ಟಿದೆ.
ಪತ್ನಿಯನ್ನು ಪಣವಾಗಿ ಇಟ್ಟು ಜೂಜಾಟದಲ್ಲಿ ಸೋತ ಕಾರಣ, ಪತ್ನಿಯನ್ನು ಸ್ನೇಹಿತರೊಂದಿಗೆ ಹೋಗಲು ಎಳೆದೊಯ್ದು ಬಿಟ್ಟಿದ್ದಾನೆ.
ಇದಕ್ಕೆ ಒಪ್ಪದಂತ ಪತ್ನಿ ಪತಿಯ ಮಾತಿಗೆ ನಿರಾಕರಿಸಿದ್ದಾಳೆ. ಆದರೂ ಬಿಡದೇ ಸ್ನೇಹಿತರಿಗೆ ಎಳೆದೊಯ್ಯದುಕೊಂಡು ಹೋಗಲು ಅನುಮತಿ ಕೊಟ್ಟಿದ್ದಾನೆ.
ಅವರೂ ಎಳೆದುಕೊಂಡು ಹೋದರು. ಆದರೆ ಹೇಗೋ ಮಾಡಿ ಪತ್ನಿ ಕೊನೆಗೆ ತಪ್ಪಿಸಿಕೊಂಡು ಓಡಿ ಬಂದಿದ್ದಾಳೆ.
ಅಲ್ಲಿಗೂ ಬಿಡದ ಪತಿ, ತಪ್ಪಿಸಿಕೊಂಡು ಬಂದ ಪತ್ನಿಯನ್ನು ಹಿಡಿದು ಥಳಿಸಿದ ಈ ಪತಿರಾಯ, ಪತ್ನಿಗೆ ಆಸಿಡ್ ಎರಚಿದ್ದಾನೆ. ಈ ಮೂಲಕ ಅಮಾನವೀಯ ಕೃತ್ಯ ಮೆರೆದಿದ್ದಾನೆ.
ಆಸಿಡ್ ದಾಳಿಗೆ ಒಳಗಾದಂತ ಮಹಿಳೆ, ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆತನ ವಿರುದ್ಧ ದೂರು ದಾಖಲಾಗಿದೆ.
More Stories
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ
ವಿರೋಧ ಲೆಕ್ಕಿಸದ ಮೋದಿ ಸರ್ಕಾರ
ಒಂದು ದೇಶ, ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಮಂಡನೆ