ಶಿರಾಡಿಗೆ ಸುರಂಗವೇ ಪರ್ಯಾಯ ಮಾರ್ಗ: 10 ವರ್ಷಗಳ ಕನಸು ಇನ್ನೂ ‌ನನಸಾಗಿಲ್ಲ

Team Newsnap
1 Min Read

ದಕ್ಷಿಣ ಕನ್ನಡ ಜಿಲ್ಲೆಯನ್ನು ರಾಜ್ಯ ರಾಜಧಾನಿಯೊಂದಿಗೆ ಸಂಪರ್ಕಿಸುವ ಪರ್ಯಾಯ ವ್ಯವಸ್ಥೆಯಾದ ಶಿರಾಡಿ ಘಾಟಿ ಸುರಂಗ ಮಾರ್ಗ ಯೋಜನೆಗೆ ಚಾಲನೆ ನೀಡುವ ಸಂಬಂಧ ಬಿರುಸಿನ‌ ಪ್ರಯತ್ನಗಳು ಸಾಗಿವೆ.

ಅಡ್ಡಹೊಳೆಯಿಂದ ಮಾರನಹಳ್ಳಿವರೆಗೆ 27 ಕಿ.ಮೀ. ಕಾಂಕ್ರೀಟ್‌ ರಸ್ತೆ ಇದೆ. ಇದರ ಜತೆಗೆ ಸುರಂಗಮಾರ್ಗ ನಿರ್ಮಾಣ ಮಾಡಿದರೆ ಮಳೆಗಾಲದ ಸಮಸ್ಯೆ, ಸಂಕಷ್ಟದಿಂದ ಪಾರಾಗಬಹುದು.

ಯೋಜನೆಯ ರೂಪರೇಷ ಏನು ?

  • ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿ ಘಾಟಿಯಲ್ಲಿ ಅಡ್ಡಹೊಳೆಯಿಂದ ಸಕಲೇಶಪುರದ ಹೆಗ್ಗದ್ದೆವರೆಗೆ 23.57 ಕಿ.ಮೀ. ಸುರಂಗ ಮಾರ್ಗ ನಿರ್ಮಾಣಕ್ಕೆ ಅನುಮೋದನಾತ್ಮಕ ಪ್ರಕ್ರಿಯೆ ಗಳು ಪೂರ್ಣಗೊಂಡಿವೆ.
  • ಅಡ್ಡಹೊಳೆ, ಗುಂಡ್ಯ, ಎಡಕುಮೇರಿ, ಕಡಗರವಳ್ಳಿ, ಮಾರನಹಳ್ಳ ಮೂಲಕ ಸಾಗುವ ಈ ಮಾರ್ಗದಲ್ಲಿ 6 ಸುರಂಗಗಳು ಮತ್ತು 10 ಸೇತುವೆಗಳು ನಿರ್ಮಾಣವಾಗಲಿವೆ.
  • ಸುಮಾರು 8 ವರ್ಷಗಳ ಹಿಂದೆ ಇದರ ಯೋಜನಾ ವೆಚ್ಚ 10,015 ಕೋ.ರು ಎಂದು ಅಂದಾಜಿಸಲಾಗಿತ್ತು. ‌
  • ಈಗ ಇದು ಸುಮಾರು 20,000 ಕೋ.ರೂ. ಆಗಬಹುದು ಎಂದು ಲೆಕ್ಕಹಾಕಲಾಗಿದೆ.

ಜಪಾನ್‌ ಇಂಟರ್‌ನ್ಯಾಶನಲ್‌ ಕೋ-ಆಪರೇಟಿವ್‌ ಏಜೆನ್ಸಿ (ಜೈಕಾ) ಇದರ ಡಿಪಿಆರ್‌ ಸಿದ್ಧಪಡಿಸಿತ್ತು. ಜೈಕಾ ಸಹಯೋಗದೊಂದಿಗೆ ಕೈಗೆತ್ತಿಕೊಳ್ಳಲು ಮೊದಲು ನಿರ್ಧರಿಸಲಾಗಿತ್ತು.

  • ಇದೀಗ ಈ ಪ್ರಸ್ತಾವನೆಯನ್ನು ಕೈಬಿಟ್ಟು ಭಾರತ ಸರಕಾರ ಭಾರತ್‌ ಮಾಲಾ ಯೋಜನೆಯಲ್ಲಿ ಕೈಗೆತ್ತಿಕೊಳ್ಳುವ ಚಿಂತನೆ ನಡೆದಿದೆ.
Share This Article
Leave a comment