ಹಿತಶತ್ರು, ಬಹಿರಂಗ ಶತ್ರು, ಅಂತರಂಗ ಶತ್ರುವೂ ಇರ್ತಾನಂತೆ, ಈ ಮೂವರು ಯಾರು ಎಂಬುದನ್ನು ಟಿಕ್ ಮಾಡುವ ಸಮಯ ಬಂದಿದೆ ಎಂದು ನಟ ದರ್ಶನ್ ತಿಳಿಸಿದರು.
ಮೈಸೂರಿನ ಬಳಿ ಇರುವ ತೂಗುದೀಪ ಫಾರ್ಮ್ ಹೌಸ್ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ದರ್ಶನ್, ನಮ್ಮ ಸುತ್ತ ಮೂರು ರೀತಿಯ ಶತ್ರುಗಳ ಇರ್ತಾರೆ ಎಂದು ದೊಡ್ಡವರು ಹೇಳಿದ್ದಾರೆ. ಈ ಮೂವರು ಶತ್ರುಗಳು ಯಾರು ಎಂದು ಮಾರ್ಕ್ ಮಾಡುವ ಸಮಯ ಇದು ಎಂದು ತಿಳಿಸಿದರು.
ಯಾರು ಎಲ್ಲಿ ಇರ್ತಾರೆ ಎಂದು ಗೊತ್ತಾಗುವುದಿಲ್ಲ. ಹಿತಶತ್ರು ಪಕ್ಕದಲ್ಲೇ ಇರ್ತಾನೆ, ಬಹಿರಂಗ ಶತ್ರು ಎದುರಲ್ಲೇ ಇರ್ತಾನೆ, ಹೇಗಾದ್ರೂ ಹೋರಾಟ ಮಾಡಬಹುದು. ಈ ಅಂತರಂಗ ಶತ್ರು ಎಲ್ಲಿರುತ್ತಾನೆ ಎಂದು ಗೊತ್ತಾಗುವುದಿಲ್ಲ. ನಾವು ಅವರು ಯಾರು ಎಂದು ಮಾರ್ಕ್ ಮಾಡಬೇಕು. ಈಗ ಎಲ್ಲರನ್ನೂ ಮಾರ್ಕ್ ಮಾಡುತ್ತಿದ್ದೇನೆ, ಇದೇನು ಹೊಸದಲ್ಲ. ನಿಮಗೀಗ ಅರ್ಥ ಆಯ್ತು ಅಂದುಕೊಳ್ಳುತ್ತೇನೆ ಎಂದರು ದರ್ಶನ್.
ಇಂದ್ರಜಿತ್ ತಾಕತ್ತು ಇದ್ರೆ?
ಇದೇ ವೇಳೆ ಸುಮಲತಾ ಮತ್ತು ಟೀಂ ಕಟ್ಟಿ ಹಾಕುವ ಪ್ರಯತ್ನ ನಡೆಯುತ್ತಿದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ನಾನು ಇದರ ಬಗ್ಗೆ ಮಾತಾಡಲ್ಲ. ಇದರ ಹಿಂದಿನ ಕಾಣದ ಕೈಗಳು ಯಾರು ಎಂದು ಪತ್ತೆ ಮಾಡುತ್ತೇನೆ. ಈ ವಿಚಾರದ ಚರ್ಚೆ ಈಗ ಬೇಡ, ಮೊದಲು ಇಂದ್ರಜಿತ್ ಲಂಕೇಶ್ ಗಂಡಸ್ಸಾಗಿದ್ರೆ ನನ್ನ ವಾಯ್ಸ್ ನೋಟ್ ಬಿಡುಗಡೆ ಮಾಡಲಿ ಎಂದು ಸವಾಲ್ ಹಾಕಿದರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ