January 5, 2025

Newsnap Kannada

The World at your finger tips!

malaki

ಮನೆ ಬಾಡಿಗೆ ಕೇಳಿದ ಮಾಲಕಿಯನ್ನೇ ಕೊಂದು, ಬಿಡದಿಯಲ್ಲಿ ಸುಟ್ಟು ಹಾಕಿದ ಬಾಡಿಗೆದಾರರು

Spread the love

ಮನೆ ಬಾಡಿಗೆ ಕೇಳಿದ್ದ ನಿವೃತ್ತ ಉಪ ತಹಸೀಲ್ದಾರ್​ ಒಬ್ಬರನ್ನು ಬಾಡಿಗೆದಾರನೊಬ್ಬ ಕತ್ತುಸೀಳಿ ಕೊಂದು ನಂತರ, ದುಷ್ಕರ್ಮಿಗಳ ಜೊತೆ ಸೇರಿ ಬಿಡದಿಯ ಬಳಿ ಶವ ಸುಟ್ಟು ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ವಿ ವಿ ಪುರಂ ಪೊಲೀಸ್​ ಠಾಣಾ ವ್ಯಾಪ್ತಿಯ ಸರಸ್ವತಿ ಪುರಂನ ರಾಜೇಶ್ವರಿ ಕೊಲೆಯಾದವರು.

ನಿವೃತ್ತ ಉಪ ತಹಸೀಲ್ದಾರ್ ರಾಜೇಶ್ವರಿ ಸರಸ್ವತಿ ಪುರಂನಲ್ಲಿ 3 ಅಂತಸ್ತಿನ ಮನೆ ಇದೆ. ಇದರಲ್ಲಿ ವಾಸವಿದ್ದ ಬಾಡಿಗೆದಾರನೇ ಕೊಲೆಗಾರ ಎಂಬ ಸತ್ಯ ಬಯಲಾಗಿದೆ.

ರಾಜೇಶ್ವರಿ ಅವರಿಗೆ ಸೇರಿದ ಮೂರು ಅಂತಸ್ತಿನ ಮನೆಯಲ್ಲಿ 2 ಮತ್ತು 3ನೇ ಮಹಡಿಯಲ್ಲಿ ಅಲಿಂ ಪಾಷಾ, ಈತನ ಅಕ್ಕ, ಚಿಕ್ಕಪ್ಪ ಮತ್ತು ಚಿಕ್ಕಮ್ಮ ಎರಡು ವರ್ಷದಿಂದ ಬಾಡಿಗೆಗೆ ವಾಸವಿದ್ದರು. ಆಲಿಂ ಪಾಷ ಆಟೋ ಡ್ರೈವರ್ ಆಗಿದ್ದ. 3ನೇ ಮಹಡಿಯಲ್ಲಿ ಆಲಿಂ ಪಾಷ ಮತ್ತು ಅಕ್ಕ ಇದ್ದರು. 2ನೇ ಮಹಡಿಯ ಮನೆಯಲ್ಲಿ ಚಿಕ್ಕಪ್ಪ ಸಾದಿಕ್ ಪಾಷ ಮತ್ತು ಪತ್ನಿ ಇದ್ದರು. 7 ತಿಂಗಳಿಂದ ಬಾಡಿಗೆ ಕಟ್ಟದೆ ಆಲಿಂ ಪಾಷ ಸತಾಯಿಸುತ್ತಿದ್ದ.

ಫೆ.3ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಾಡಿಗೆ ಹಣ ಸಂಗ್ರಹಿಸಲು ಮನೆ ಬಳಿಗೆ ನಿವೃತ್ತ ತಹಸೀಲ್ದಾರ್ ರಾಜೇಶ್ವರಿ ಹೋಗಿದ್ದರು. ಬಾಡಿಗೆದಾರ ಆಲಿಂ ಪಾಷ ಹಣ ಕೊಡದ್ದಾಗ ಪೊಲೀಸರಿಗೆ ದೂರು ಕೊಡುವುದಾಗಿ ಮನೆಯ ಮಾಲಕಿ ರಾಜೇಶ್ವರಿ ಎಚ್ಚರಿಸಿದ್ದಾರೆ.

ಗಾಂಜಾ ಮತ್ತಿನಲ್ಲಿದ್ದ ಆಲಿಂ ಪಾಷ, ಕುಪಿತಗೊಂಡು ರಾಜೇಶ್ವರಿಯ ಕತ್ತು ಕೊಯ್ದು ಕೊಂದಿದ್ದಾನೆ.

ಕೂಡಲೇ ಚಿಕ್ಕಪ್ಪ ಹಾಗೂ ಸ್ನೇಹಿತನಿಗೆ ಕರೆ ಮಾಡಿ ಕರೆಸಿಕೊಂಡ ಆರೋಪಿ,ರಾಜೇಶ್ವರಿ ಶವವನ್ನು ಆಟೋದಲ್ಲಿ ಹಾಕಿಕೊಂಡು ಹೋಗಿದ್ದಾರೆ. ಗಿರಿನಗರ ಬಿಡಿಎ ಪಾರ್ಕನಲ್ಲಿ ರಾಜೇಶ್ವರಿಯ ಮೊಬೈಲ್ ಅನ್ನು ಎಸೆದ ಆರೋಪಿಗಳು, ಆಟೋದಲ್ಲಿ ಶವ ತೆಗೆದುಕೊಂಡು ಬಿಡದಿಗೆ ಹೋಗಿದ್ದಾರೆ. ಅಲ್ಲೇ ರಾಜೇಶ್ವರಿಯ ಶವ ಸುಟ್ಟುಹಾಕಿದ್ದಾರೆ.

ರಾಜೇಶ್ವರಿ ಕಾಣಿಸುತ್ತಿಲ್ಲ ಎಂದು ಕುಟುಂಬಸ್ಥರು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ನೀಡುತ್ತಾರೆ.

ತನಿಖೆ ಕೈಗೊಂಡ ಪೊಲೀಸರು ಬಾಡಿಗೆದಾರರನ್ನು ಕರೆಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಆರೋಪಿ ಆಲಿಂ ಪಾಷನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!