January 10, 2025

Newsnap Kannada

The World at your finger tips!

GIRL 1

ಕಾಲೇಜು ವಿದ್ಯಾರ್ಥಿನಿಯ ಅನುಮಾಸ್ಪದ ಸಾವು – ಉಸಿರುಗಟ್ಟಿಸಿ ಕೊಂದಿರುವ ಶಂಕೆ?

Spread the love

ಯಾರೂ ಇಲ್ಲದ ವೇಳೆಯಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳನ್ನು ಕೊಲೆ ಮಾಡಿದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲಿನ ಹೊಸಪಾಳ್ಯದಲ್ಲಿ ಜರುಗಿದೆ.

ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾಂಕ (18 ವರ್ಷ) ಎಂಬಾಕೆಯೇ ಕೊಲೆಯಾದ ಯುವತಿ.

ಶ್ರೀನಿವಾಸಪುರ ಮೂಲದ ಯುವತಿಯ ಕುಟುಂಬದವರು ಹೊಸಪಾಳ್ಯ ದಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.

ನಿನ್ನೆ ಮನೆಯಲ್ಲಿ ಯಾರೂ ಇರಲಿಲ್ಲ. ಯುವತಿ ಮನೆಯಲ್ಲಿ ಇರುವುದನ್ನು ನೆರೆ ಹೊರೆಯವರು ನೋಡಿದ್ದಾರೆ. ಆದರೆ ಪಾಲಕರು ಮನೆಗೆ ಬಂದು ನೋಡಿದಾಗ ಯುವತಿ ಮನೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಮನೆಗೆ ನುಗ್ಗಿದ ದುಷ್ಕರ್ಮಿಗಳು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.

ಕೋಲಾರ ಎಸ್ ಪಿ ಕಾರ್ತಿಕ್ ರೆಡ್ಡಿ, ಎಎಸ್ ಪಿ ಜಾಹ್ನವಿ, ಡಿವೈಎಸ್ ಪಿ ರವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.

ಮುಳಬಾಗಿಲು ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಯುವತಿಯ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

Copyright © All rights reserved Newsnap | Newsever by AF themes.
error: Content is protected !!