ಜನಪ್ರತಿನಿಧಿಗಳಿಗೆ ಆಘಾತಕಾರಿ ಸುದ್ದಿ ನೀಡಿದ ಸುಪ್ರೀಂಕೋರ್ಟ್

Team Newsnap
1 Min Read
NEET-PG 2021 - Counseling for 1,456 seats only: Supreme

ಮಾಜಿ/ಹಾಲಿ‌ ಶಾಸಕ ಹಾಗೂ ಸಂಸದರಿಗೆ ಸುಪ್ರೀಂ ಕೋರ್ಟ್ ಆಘಾತಕಾರಿ ಸುದ್ದಿಯನ್ನು ನೀಡಿದೆ. ಜನಪ್ರತಿನಿಧಿಗಳ ಮೇಲಿನ ಕ್ರಿಮಿನಲ್‌ ಪ್ರಕರಣಗಳ‌ ತ್ವರಿತ ವಿಚಾರಣೆಗೆ ‘ಫಾಸ್ಟ್ ಟ್ರ್ಯಾಕ್’ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಲು ಪ್ರತೀ ರಾಜ್ಯದ ಹೈಕೋರ್ಟ್ ಗಳಗೆ ಆದೇಶ ನೀಡಿದೆ.

ಹಾಲಿ/ಮಾಜಿ ಶಾಸಕರು ಹಾಗೂ ಸಂಸದರ ಮೇಲೆ‌ ಕೇಳಿಬಂದ ಅನೇಕ ಅಪರಾಧ ಪ್ರಕರಣಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ ಸುಪ್ರೀಂ, ಜನಪ್ರತಿನಿಧಿಗಳ ವಿರುದ್ಧ ಇರುವ ಯಾವುದೇ ಪ್ರಕರಣದ ಮೇಲ್ವಿಚಾರಣೆಗೆ ಪ್ರತೀ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ತಮ್ಮನ್ನು ಒಳಗೊಂಡಂತೆ ವಿಶೇಷ ಪೀಠವನ್ನು ಸ್ಥಾಪಿಸಲು ಹೇಳಿದೆ‌.

೨೦೧೪ರಲ್ಲಿ ಹಾಲಿ/ಮಾಜಿ ಜನಪ್ರತಿನಿಧಿಗಳ ವಿರುದ್ಧ ಇರುವ ಪ್ರಕರಣಗಳ ವಿಚಾರಣೆಯನ್ನು ಒಂದು ವರ್ಷದ ಒಳಗೇ ಪೂರ್ಣಗೊಳಿಸಲು ಅದೇಶ ನೀಡಿತ್ತು. ಆದರೆ ಇದುವರೆಗೂ ಅದು ಸಾಧ್ಯವಾಗಿಲ್ಲ. ಗುರುವಾರ ಎನ್. ವಿ. ರಮಣ ನೇತೃತ್ವದ ಪೀಠವು ‘ಹಾಲಿ/ಮಾಜಿ ಜನಪ್ರತಿತ ಪ್ರಕರಣಗಳ ಇತ್ಯರ್ಥಕ್ಕೆ ತೆಗೆದುಕೊಳ್ಳುವ ಸಮಯ ಸುಧಾರಣೆಯಾಗಿಲ್ಲ.’ ಎಂದು ವಿಷಾದ ವ್ಯಕ್ತಪಡಿಸಿ ‘ಜನಪ್ರತಿನಿಧಿಗಳ ಈಗ ಇರುವ ಪ್ರಕರಣಗಳನ್ನು ಒಳಗೊಂಡಂತೆ ಎಲ್ಲ ಪ್ರಕರಣಗಳನ್ನು ಇತ್ಯರ್ಥ ಮಾಡಲು ಹೈಕೋರ್ಟ್ ಮುಖ್ಯ
ನ್ಯಾಯ ಧೀಶರು ಹಾಗೂ ನಿಯೋಜಿತರನ್ನೊಳಗೊಂಡ ಪೀಠದ ಮುಂದೆ ಎಲ್ಲ ಮುಖ್ಯ ನ್ಯಾಯಮೂರ್ತಿಗಳು ಪಟ್ಟಿ ಮಾಡಲು ಸೂಚಿಸಲಾಗಿದೆ.

Share This Article
Leave a comment