January 10, 2025

Newsnap Kannada

The World at your finger tips!

supreme court ramana

ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಾಧೀಶರಾಗಿ ನ್ಯಾ. ರಮಣ ಹೆಸರು ಶಿಫಾರಸು

Spread the love

ಮುಂದಿನ ತಿಂಗಳು ನಿವೃತ್ತಿ ಹೊಂದಲಿರುವ ಮುಖ್ಯ ನ್ಯಾಯಮೂರ್ತಿ ಎಸ್​.ಎ ಬೋಬ್ಡೆ ತಮ್ಮ ಉತ್ತರಾಧಿಕಾರಿಯಾಗಿ ನ್ಯಾ. ಎನ್​.ವಿ ರಮಣ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ.

ಆಂಧ್ರಪ್ರದೇಶದ ಕೃಷಿ ಕುಟುಂಬದ ವರಾದ ರಮಣ 2000 ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್​ನ ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಬಳಿಕ ದೆಹಲಿ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. 2014ರಲ್ಲಿ ಸುಪ್ರೀಂಕೋರ್ಟ್​ ಜಡ್ಜ್​​ ಆಗಿ ನೇಮಕಗೊಂಡಿದ್ದರು.

ಬೋಬ್ಡೆ ಏಪ್ರಿಲ್ 23 ಕ್ಕೆ ನಿವೃತ್ತಿ:

ಮುಖ್ಯ ನ್ಯಾಯಾಧೀಶ ಬೋಬ್ಡೆ ಏಪ್ರಿಲ್ 23ಕ್ಕೆ ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಕಳೆದ ವಾರ ಅವರಿಗೆ ಮುಂದಿನ ಸಿಜೆಐ ಸ್ಥಾನಕ್ಕೆ ಹೆಸರು ಶಿಫಾರಸು ಮಾಡುವಂತೆ ಕೇಳಿತ್ತು.

ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್​ ಕಳೆದ ಶುಕ್ರವಾರ ಬೋಬ್ಡೆ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದರು.

ಪ್ರಸ್ತುತ ಬೋಬ್ಡೆ ನಂತರ ಸುಪ್ರೀಂಕೋರ್ಟ್​ನಲ್ಲಿ ಅತ್ಯಂತ ಹಿರಿಯರಾಗಿರುವ ನ್ಯಾ.​​ ಎನ್​​.ವಿ ರಮಣ. ಅವರಿಗೆ 2022 ಆಗಸ್ಟ್​​ 6ರವರೆಗೆ ಅಂದ್ರೆ ಒಂದು ವರ್ಷ 4 ತಿಂಗಳ ಕಾಲ ಸಿಜೆಐ ಆಗಿ ಸೇವೆ ಸಲ್ಲಿಸುವ ಅವಕಾಶವಿದೆ.

Copyright © All rights reserved Newsnap | Newsever by AF themes.
error: Content is protected !!