ಮಂಡ್ಯ ತಾಲೂಕಿನ ಹಲ್ಲೆಗೆರೆ ಗ್ರಾಮದ ನಿವಾಸಿ ಶಂಕರ್ ಕುಟುಂಬದ ಐವರು ಸದಸ್ಯರು ಬೆಂಗಳೂರಿನಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಪ್ರಮುಖವಾಗಿ ಹಣಕಾಸಿನ ವ್ಯವಹಾರವೇ ಕಾರಣ ಎಂದು ಗೊತ್ತಾಗಿದೆ.
ಬೆಂಗಳೂರಿನ ಬ್ಯಾಡರಹಳ್ಳಿ ಹಳ್ಳಿ ಠಾಣಾ ವ್ಯಾಪ್ತಿಯ ತಿಗರಪಾಳ್ಯದಲ್ಲಿ ನಡೆದಿರುವ ಘನಘೋರ ದುರಂತಕ್ಕೆ ಕಾರಣಗಳನ್ನು ತಿಳಿಯಲು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಈ ಸಾಮೂಹಿಕ ಆತ್ಮಹತ್ಯೆ ಗೆ ಕೌಟುಂಬಿಕ ಕಲಹ, ಆರ್ಥಿಕ ವ್ಯವಹಾರವೇ ಕಾರಣವಾಯಿತೆ ಎಂಬ ಅನುಮಾನ ಮೂಡಿದೆ.
ಅಬ್ಕಾರಿ ಹಾಗೂ ಶಾಸಕ ಎಂಬ ಪತ್ರಿಕೆ ಗಳ ಸಂಪಾದಕರಾಗಿರುವ ಹಲ್ಲೆಗೇರೆ ಶಂಕರ್ ಕುಟುಂಬದವರ ಜೊತೆ ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದರು ಎನ್ನಲಾಗುತ್ತಿದೆ.
ಮಗಳು ಸಿಂಧೂರಾಣಿ ಗಂಡನ ಮನೆಗೆ ಹೋಗದ ಬಗ್ಗೆಯೂ ಶಂಕರ್ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಇದರಿಂದಲೇ ಕಳೆದ ಐದು ದಿನಗಳಿಂದ ಶಂಕರ್ ಅವರು ಮನೆಗೆ ಕೂಡ ಬಂದಿರಲಿಲ್ಲವಂತೆ.
ಚೀಟಿ ಹಣ 10 ಲಕ್ಷ ರು ಬಳಕೆಗೂ ಗಲಾಟೆ ? :
ಈ ನಡುವೆ ಕುಟುಂಬದಲ್ಲಿ ಎಂಎಸ್ ಐಎಲ್ ನಲ್ಲಿ ಕಟ್ಟಿದ್ದ ಚೀಟಿ ಹಣ 10 ಲಕ್ಷ ರೂಪಾಯಿ ಬಳಕೆ ಕುರಿತಂತೆ ಮನೆಯಲ್ಲಿ ಜಗಳ ನಡೆದಿದ್ದಂತೆ. ಶಂಕರ್ ಒಂದು ಕಡೆಯಾದರೆ ಮನೆಯ ಉಳಿದವರು ಇನ್ನೊಂದು ಕಡೆ ಇದ್ದರಂತೆ. ಇದೇ ಕಾರಣದಿಂದ ಭಾನುವಾರ ಸಂಜೆ ಕೂಡ ಕುಟುಂಬಸ್ಥರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ.
ಈ ನಡುವೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ತನಿಖೆ ನಂತರ ಸಾವಿನ ಕಾರಣಗಳು ಪತ್ತೆಯಾಗಲಿದೆ. ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದೇವೆ. ಘಟನೆಯಲ್ಲಿ ಬದುಕುಳಿದಿರುವ ಮಗುವನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ