February 22, 2026

Newsnap Kannada

The World at your finger tips!

congress , list , candidates , election

Congress leaders book 2 hotels to keep new MLAs safe ಕಾಂಗ್ರೆಸ್ ನಾಯಕರಿಂದ ನೂತನ ಶಾಸಕರನ್ನು ಸೇಫ್ ಮಾಡಲು 2 ಹೋಟೆಲ್ ಬುಕ್

ರಾಜ್ಯದ ಮೂರು‌‌ ವಿಧಾನ ಕ್ಷೇತ್ರ: ಅಭ್ಯರ್ಥಿಗಳ ‌ಹೆಸರು ಆಖೈರುಗೊಳಿಸಿದ ಕಾಂಗ್ರೆಸ್ ‌

Spread the love

ರಾಜ್ಯದ ಎರಡು ವಿಧಾನಸಭಾ ಕ್ಷೇತ್ರ ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.

ಸಿಂದಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ನಿಗದಿಗೂ ಮುನ್ನ ಅಭ್ಯರ್ಥಿಯ ಹೆಸರನ್ನು ಕಾಂಗ್ರೆಸ್ ಪ್ರಕಟಿಸಿದೆ.

ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ? :

  • ಬಸವಕಲ್ಯಾಣ- ಶ್ರೀಮತಿ ಮಲ್ಲಮ್ಮ (ದಿ.ನಾರಾಯಾಣ್ ರಾವ್ ಪತ್ನಿ)
  • ಮಸ್ಕಿ – ಬಸನಗೌಡ ತುರುವಿಹಾಳ
  • ಸಿಂದಗಿ – ಅಶೋಕ್ ಮನಗೂಳಿ (ದಿ.ಎಂ.ಸಿ.ಮನಗೂಳಿ ಪುತ್ರ)

ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಕಾಂಗ್ರೆಸ್ ಅಂತಿಮಗೊಳಿಸಿಲ್ಲ. ಶುಕ್ರವಾರ ಸಂಜೆಯೊಳಗೆ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಪ್ರಕಟವಾಗುವ ಸಾಧ್ಯತೆಗಳಿವೆ.

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸತೀಶ್ ಜಾರಕಿಹೊಳಿ ಹೆಸರು ಕಾಂಗ್ರೆಸ್ ಅಂತ್ಯ ಗೊಳಿಸುವ ಸಾಧ್ಯತೆ ಇದೆ.

ಮೂರು ಕ್ಷೇತ್ರಗಳ ಮತದಾನ ಮೇ 2 ರಂದು ನಡೆಯಲಿದೆ. ಮಾರ್ಚ್‌ 30 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ಏಪ್ರಿಲ್‌ 4 ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನವಾಗಿದೆ.

error: Content is protected !!