ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ ಬಳಕೆಯ ಎಲ್ಲಾ ವಸ್ತುಗಳ ಮೇಲೆ ಕ್ರಮೇಣ ಇದರ ಪರಿಣಾಮ ಬೀರುತ್ತದೆ. ಸರಕುಗಳ ಸಾಗಣೆಗೆ ಪೆಟ್ರೋಲ್ ಡಿಸೇಲ್ ಅಗತ್ಯವಾಗಿರುವುದರಿಂದ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಹೀಗಾಗಿ ಪ್ರತಿದಿನ ಎಲ್ಲರೂ ಪೆಟ್ರೋಲ್ ಡಿಸೇಲ್ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ಆದರೆ ಇದೀಗ ರಾಜ್ಯದ ಜನರಿಗೆ ಸರ್ಕಾರ ತೈಲ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟಿದೆ.
ಇಂದು ಮಧ್ಯ ರಾತ್ರಿಯಿಂದಲೇ ಪೆಟ್ರೋಲ್ 3 ರು ಹಾಗೂ ಡಿಸೇಲ್ ದರ ಪ್ರತಿ ಲೀಟರ್ಗೆ 3 ರೂ 50 ಪೈಸೆ ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಈ ಹಿಂದೆ ಟ್ಯಾಕ್ಸ್ ದರ ಪೆಟ್ರೋಲ್ 25.92% ಇತ್ತು. ಆದರೆ ಈಗ 29.84% ಏರಿಕೆಯಾಗಿದೆ. ಈ ಹಿಂದೆಯಿದ್ದ ಡಿಸೇಲ್ ದರ 14.34%. ಈಗ 18.44 ಏರಿಕೆಯಾಗಿದೆ. ಹಾಗಾದರೇ ಪೆಟ್ರೋಲ್ ದರದಲ್ಲಿ 3.9 ಪ್ರತಿಶತದಷ್ಟು ಹೆಚ್ಚಾಗಿದೆ. ಇತ್ತ ಡಿಸೇಲ್ ದರ 4.1 ಪ್ರತಿಶತದಷ್ಟು ಏರಿಕೆ ಕಂಡಿದೆ. ರಾಜ್ಯದಲ್ಲಿ 99.84 ರೂಪಾಯಿ ಇದ್ದ ಪೆಟ್ರೋಲ್ ದರ 103.89 ಆಗಿದೆ. 85.56 ರೂಪಾಯಿ ಇದ್ದ ಡಿಸೇಲ್ ದರ ಈಗ 88.90 ರಷ್ಟು ಹೆಚ್ಚಳ ಆಗಲಿದೆ.ಶೀಘ್ರದಲ್ಲೇ ಜಿಪಂ, ತಾ ಪಂ ಚುನಾವಣೆ: ಸಿಎಂ ಸಿದ್ದರಾಮಯ್ಯ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು