ಮನೆಕೆಲಸ ಮಾಡುವ ಸಿಬ್ಬಂದಿಗೆ ನಮ್ಮಲ್ಲಿ ಎಷ್ಟು ಸಂಬಳ ಸಿಗುತ್ತದೆ…? ನಗರ ಪ್ರದೇಶದಲ್ಲಿ ಹೆಚ್ಚೆಂದರೆ ಹತ್ತು, ಹದಿನೈದು ಸಾವಿರದ ಆಸುಪಾಸು ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಸಿಗಬಹುದೇನೋ. ಇದಕ್ಕಿಂತಲೂ ಕಡಿಮೆ ಸಂಬಳ ಪಡೆಯುವವರೂ ತುಂಬಾ ಜನ ಇದ್ದಾರೆ. ಇನ್ನು ಶ್ರೀಮಂತರ ಮನೆಯಲ್ಲಿ ಕೆಲಸ ಮಾಡುತ್ತಿದ್ದರೆ ಇದಕ್ಕಿಂತಲೂ ಇನ್ನೊಂದಷ್ಟು ಹೆಚ್ಚು ಸಾವಿರ ಸಿಗಬಹುದು.
ಆದರೆ, ಮನೆ ಕೆಲಸದ ಸಿಬ್ಬಂದಿಗೆ ಲಕ್ಷಾಂತರ ರೂಪಾಯಿ ಸಂಬಳ ಕೂಡಾ ಸಿಗುತ್ತದೆ ಎಂದರೆ ನಂಬುತ್ತೀರಾ…? ನಂಬಲೇಬೇಕು.
ಸದ್ಯ ಮನೆಕೆಲಸದವರಿಗೆ ಸಂಬಳ 18.5 ಲಕ್ಷ ರೂಪಾಯಿ ಸಂಬಳ ನೀಡುವ ಆಫರ್ ಅನ್ನು ಬ್ರಿಟಿಷ್ ರಾಜ ಕುಟುಂಬ ನೀಡಿದೆ. ಈ ಬಗ್ಗೆ ರಾಜ ಪರಿವಾರ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ.
ರಾಜ ಕುಟುಂಬದ ವಿಂಡ್ಸರ್ ಕ್ಯಾಸಲ್‌ನಲ್ಲಿ ಕೆಲಸ ಮಾಡಲು ಸೂಕ್ತ ಸಿಬ್ಬಂದಿಯ ಹುಡುಕಾಟವನ್ನು ಇವರು ನಡೆಸುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗೆ ಆರಂಭಿಕ 19,140.09 ಪೌಂಡ್ ಎಂದರೆ ಭಾರತದ ಸುಮಾರು 18.5 ಲಕ್ಷ ರೂಪಾಯಿ ಸಂಬಳ ಸಿಗಲಿದೆ.
ಈ ಕೆಲಸಕ್ಕೆ `ಲೆವೆಲ್ 2 ಅಪ್ರೆಂಟಿಸ್‌ಶಿಪ್ ಜಾಬ್’ ಎಂದು ಪಟ್ಟಿ ಮಾಡಲಾಗಿದೆ. ಇಲ್ಲಿ ಆಯ್ಕೆಯಾದ ಕೆಲಸಗಾರರು ವಿಂಡ್ಸರ್ ಕ್ಯಾಸಲ್‌ನಲ್ಲಿ ರಾಜ ಕುಟುಂಬದೊಂದಿಗೆಯೇ ನೆಲೆಸುವ ಅವಕಾಶ ಇರುತ್ತದೆ. ಇವರಿಗೆ ವಾರಕ್ಕೆ ಐದು ದಿನ ಮಾತ್ರ ಕೆಲಸ ಇರುತ್ತದೆ.
ಆಯ್ಕೆ ಆದ ಅಭ್ಯರ್ಥಿಯು ವರ್ಷ ಪೂರ್ತಿ ರಾಜಪರಿವಾರದ ಇತರ ನಿವಾಸಗಳಲ್ಲೂ ಕೆಲಸ ಮಾಡಬೇಕಾಗುತ್ತದೆ. ಇದರಲ್ಲಿ ಬಕಿಂಗ್ಹ್ಯಾಮ್ ಅರಮನೆ ಕೂಡಾ ಸೇರಿದೆ. ಅಭ್ಯರ್ಥಿಗಳು ಇಂಗ್ಲೀಷ್ ಮತ್ತು ಗಣಿತದಲ್ಲಿ ಅರ್ಹತೆ ಪಡೆದಿರಬೇಕಾಗುತ್ತದೆ ಮತ್ತು ಈ ಪ್ಯಾಕೇಜ್‌ನಲ್ಲಿ 33 ದಿನಗಳ ರಜೆ ಕೂಡಾ ಒಳಗೊಂಡಿದೆ.
ಅರಮನೆಯ ಒಳಾಂಗಣ, ಅಪೂರ್ವ ವಸ್ತುಗಳ ಸ್ವಚ್ಛತೆಯ ಜವಾಬ್ದಾರಿಯನ್ನೂ ಇವರೇ ವಹಿಸಿಕೊಳ್ಳಬೇಕಾಗುತ್ತದೆ. ಇನ್ನು, ಆಯ್ಕೆಯಾದ ತಕ್ಷಣ ಸಿಬ್ಬಂದಿಗೆ ಕೆಲಸ ನಿರ್ವಹಿಸಲು ಅವಕಾಶವಿಲ್ಲ. ನಿಜವಾದ ಕೆಲಸ ಆರಂಭವಾಗುವ ಮೊದಲು 13 ತಿಂಗಳುಗಳ ಕಾಲ ತರಬೇತಿಯನ್ನೂ ನೀಡಲಾಗುತ್ತದೆ. ಒಮ್ಮೆ ತರಬೇತಿ ಪೂರ್ಣಗೊಂಡ ಬಳಿಕ ಈ ಅಭ್ಯರ್ಥಿ ಅರಮನೆಯ ಖಾಯಂ ನೌಕರರಾಗುತ್ತಾರೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ.
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್