November 23, 2024

Newsnap Kannada

The World at your finger tips!

WhatsApp Image 2024 08 23 at 9.17.55 PM

ನಾಲ್ವಡಿ ಕೃಷ್ಣರಾಜರ ಸೇವೆ ಮರೆಯಲಾಗದು – ಯದುವೀರ್

Spread the love

ಬೆಂಗಳೂರು : ಡಾ.ಬಿಎನ್‌ವಿ.ಜ್ಯೋತಿ ಮೆಮೋರಿಯಲ್ ಎಡ್ಯುಕೇಶನಲ್ ಟ್ರಸ್ಟ್‌ನ ಅಂಗ ಸಂಸ್ಥೆ ’ಜ್ಯೋತಿ ಇನ್ಸಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್’ನ ನೂತನ ಕಟ್ಟಡದ ’ನಾಲ್ವಡಿ ಕೃಷ್ಣರಾಜ ಒಡೆಯರ್’ ಬ್ಲಾಕ್‌ಅನ್ನು ಮೈಸೂರು ರಾಜ ವಂಶಿಕ ಹಾಗೂ ಕೊಡಗು-ಮೈಸೂರು ಕ್ಷೇತ್ರದ ಲೋಕಸಭಾ ಸದಸ್ಯ.ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಗಾಟಿಸಿದರು.

ನೂತನ ಕಟ್ಟಡಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ನಾಮಕರಣ ಮಾಡಿರುವುದು ಸಂತಸ ತಂದಿದೆ. ಇವರ ಹೆಸರು ಕನ್ನಡನಾಡಿಗೆ ಹೆಮ್ಮೆಯ ವಿಷಯವಾಗಿದೆ. ಅವರು ತಮ್ಮ ಸಂಪೂರ್ಣ ಜೀವನವನ್ನು ಸಾಮಾಜಿಕ ಹಾಗೂ ಆರ್ಥಿಕ ನ್ಯಾಯಕ್ಕಾಗಿ ಮುಡುಪಾಗಿಟ್ಟಿದ್ದರು. ಇವರ ಸೇವೆಯನ್ನು ಪರಿಗಣಿಸಿ ಜ್ಯೋತಿ ಶಿಕ್ಷಣ ಸಂಸ್ಥೆಯ ಒಂದು ಕಟ್ಟಡಕ್ಕೆ ಹೆಸರನ್ನು ಇಡಲಾಗಿದೆ. ಸಂಸ್ಥೆಯು ಸಕರಾತ್ಮಕವಾಗಿ ಕೆಲಸಗಳನ್ನು ಮಾಡುತ್ತಿರುವುದಕ್ಕೆ ಶ್ಲಾಘಿಸಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ.

ಜ್ಯೋತಿ ಸಂಸ್ಥೆಗೆ ಐಎಸ್‌ಓ ಪ್ರಮಾಣ ಪತ್ರ ಬಂದಿದೆ. ಇದು ಮುಂದೆ ದೊಡ್ಡ ಮಟ್ಟದಲ್ಲಿ ಬೆಳೆಯಬೇಕೆಂದು ಪ್ರಾರ್ಥನೆ ಮಾಡುತ್ತೇನೆ. ಇಲ್ಲಿಗೆ ಬಂದಾಗ ಸಕರಾತ್ಮಕವಾದ ಕಂಪನ ಬಂತು. ಇದೇ ರೀತಿಯಲ್ಲಿ ಉಳಿದೆಲ್ಲಾ ಸಂಸ್ಥೆಗಳು ಮಾಡಿದರೆ ಸಮಾಜದ ಏಳಿಗೆ ನಿಶ್ವಿತವಾಗಿ ಅಭಿವೃದ್ದಿಗೊಳ್ಳುತ್ತದೆಂದು ಅಭಿಪ್ರಾಯಪಟ್ಟರು.ಮೈಸೂರು ಹಾಗೂ ಕೊಡಗು ಗಡಿ ಭಾಗದಲ್ಲಿ ಭೂಕಂಪನದ ಅನುಭವ

ಕಾರ್ಯಕಾರಿ ನಿರ್ದೇಶಕರಾದ ರಾಜೇಶ್.ಕೆ ಅವರು ಸಂಸ್ಥೆಯು ಬೆಳೆದು ಬಂದ ರೀತಿಯ ವಿವರ ನೀಡಿದರು. ಸಮಾರಂಭದಲ್ಲಿ ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿಅನಂತಕುಮಾರ್, ಟ್ರಸ್ಟ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕಿ ಬಿ.ವಿ.ಸೀತಾ, ನಿರ್ದೇಶಕರುಗಳು, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಉಪಸ್ತಿತರಿದ್ದರು. ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕ, ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

Copyright © All rights reserved Newsnap | Newsever by AF themes.
error: Content is protected !!