January 16, 2025

Newsnap Kannada

The World at your finger tips!

deepa1

ಮಾನವೀಯ ಮೌಲ್ಯಗಳ ಪುನರುತ್ಥಾನ: ಜ್ಞಾನ ಭಿಕ್ಷಾ ಪಾದಯಾತ್ರೆ ಅವಲೋಕನ

Spread the love

200 ದಿನಗಳು,
6000 ಕಿಲೋಮೀಟರುಗಳು
500 ಸಂವಾದಗಳು,
15 ಜಿಲ್ಲೆಗಳು,
125 ತಾಲ್ಲೂಕುಗಳು,
1000ರಾರು ಗೆಳೆಯರುಗಳು,
1000ರಾರು ಗ್ರಾಮಗಳು,
100000ತರ ಹೆಜ್ಜೆಗಳು,
10000000ತರ ಗಿಡಮರಗಳು,…..

ಸಾಮಾನ್ಯನೊಬ್ಬನಿಗೆ ಈ ಸಮಾಜ ತೋರಿದ ಪ್ರೀತಿ ಆತಿಥ್ಯ ಅಭಿಮಾನ ನಿಜಕ್ಕೂ ವಿಸ್ಮಯ ಮೂಡಿಸಿದೆ. ಕೃತಜ್ಞತೆ ಸಲ್ಲಿಸಲು ಪದಗಳಿಗೆ ಹುಡುಕಾಡಬೇಕಾಗಿದೆ.

ನವೆಂಬರ್ ಒಂದು 2020 ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ವನಮಾರ್ಪಳ್ಳಿಯಿಂದ ಪ್ರಾರಂಭವಾದ ಜ್ಞಾನ ಭಿಕ್ಷಾ ಪಾದಯಾತ್ರೆ .ನಿನ್ನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿಗೆ ತಲುಪಿದ ಹಾದಿ ಒಂದು ರೋಚಕ ಅನುಭವ.

ಯಾರಿಂದಲೂ ಹಣ ಪಡೆಯದೆ, ಯಾವುದೇ ಸ್ವಂತ ಹಣ ಖರ್ಚು ಮಾಡದೆ, ಯಾವುದೇ ವಾಹನ ಉಪಯೋಗಿಸದೆ, ಯಾವುದೇ ಜಾತಿ ಧರ್ಮ ಭಾಷೆ ಪಕ್ಷ ಸಿದ್ಧಾಂತ ಪಂಥ ಬಾವುಟಗಳ ಮಿತಿಗೆ ಒಳಪಡದೆ ನಿಜ ಮನುಷ್ಯರ ಹುಡುಕಾಟದ ಈ ಜ್ಞಾನ ಭಿಕ್ಷಾ ಪಾದಯಾತ್ರೆ ಕೇವಲ ಓದುಗ ಗೆಳೆಯರ ಸಹಕಾರದಿಂದ
” ಮಾನವೀಯ ಮೌಲ್ಯಗಳ ಪುನರುತ್ಥಾನದ ” ಬಗ್ಗೆ ಒಂದು ಸಣ್ಣ ಮಟ್ಟದ ಚರ್ಚೆ ಹುಟ್ಟುಹಾಕುವಲ್ಲಿ ಸಣ್ಣ ಪ್ರಮಾಣದಲ್ಲಿ ಯಶಸ್ವಿಯಾಗಿದೆ ಎಂದು ಭಾವಿಸಿದ್ದೇನೆ.

ಇಂದಿನ ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿಯ ಸಂದರ್ಭದಲ್ಲಿ, ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮುಕ್ತತೆ ಮತ್ತು ವೇದಿಕೆ ನಿರ್ಮಾಣವಾಗಿರುವ ಸನ್ನಿವೇಶದಲ್ಲಿ, ವ್ಯವಸ್ಥೆಯ ಸತ್ಯ ಮತ್ತು ವಾಸ್ತವವನ್ನೇ ಬುಡಮೇಲು ಮಾಡುವ ಕಪೋಲ ಕಲ್ಪಿತ ಸುಳ್ಳುಗಳನ್ನೇ ನಿಜವೆಂದು ಬಿಂಬಿಸುವ ಏಜೆಂಟ್ ಗಳು ಕಾರ್ಯನಿರ್ವಹಿಸುತ್ತಿರುವ ಸಮಯದಲ್ಲಿ, ಮನುಷ್ಯನ ಮುಖವಾಡಗಳೇ ಸಹಜ ಎನ್ನುವಷ್ಟು ವಿಜೃಂಭಿಸುತ್ತಿರುವಾಗ, ಅನೇಕ ಸೈದ್ಧಾಂತಿಕ ತಾಕಲಾಟಗಳ ನಡುವೆ ನಿಜ ಮನುಷ್ಯರ ಹುಡುಕಾಟ ಒಂದು ದೊಡ್ಡ ಸವಾಲು.

ಒಂದು ಸಣ್ಣ ಬರಹ ಅಥವಾ ಮಾತು ಅಥವಾ ಫೋಟೋ ಅಥವಾ ಸ್ನೇಹ ಯಾವುದೇ ಇರಲಿ ಒಂದು ಸಿದ್ದಾಂತ ಅಥವಾ ಪಕ್ಷ ಅಥವಾ ಧರ್ಮದ ಜನರೊಂದಿಗೆ ಮಾತನಾಡಿದ ಮಾತ್ರಕ್ಕೆ ಅದರೊಂದಿಗೆ ಜೋಡಿಸಿ ಇಡೀ ವ್ಯಕ್ತಿತ್ವವನ್ನು ಸಂಕುಚಿತಗೊಳಿಸಿ ವಿಕೃತ ಆನಂದ ಪಡುವ, ನಮ್ಮ ನೈತಿಕತೆಯನ್ನು ಕುಗ್ಗಿಸುವ ಪ್ರಯತ್ನಗಳ ನಡುವೆ ಎಲ್ಲರ ನಡುವೆಯೂ ಕನಿಷ್ಠ ಮಟ್ಟದ ಮಾನವೀಯ ಮೌಲ್ಯಗಳನ್ನು ಬಿತ್ತುವುದು ಸಹ ಮತ್ತೊಂದು ಸವಾಲು.

ಎಡ ಬಲ ಪಂಥಗಳ ನಡುವೆ ಸಮನ್ವಯವೇ ಸಾಧ್ಯವಿಲ್ಲ ಎನ್ನುವ ಕಠೋರ ಉಗ್ರವಾದಿಗಳ ನಡುವೆ ನುಗ್ಗಿ ಮಾನವೀಯತೆಯ ಮುಂದೆ ಈ ಪಂಥಗಳು ಅತ್ಯಂತ ಕ್ಷುಲ್ಲಕ, ಈ‌ ಧರ್ಮಗಳು ಸಮಾಜವನ್ನು ಒಡೆಯುತ್ತವೆ, ಈ ಪಕ್ಷಗಳು ದೇಶವನ್ನು ನಾಶ ಮಾಡುತ್ತವೆ, ಈ‌ ಸಿದ್ದಾಂತಗಳು ಅಭಿವೃದ್ಧಿಯನ್ನು ಕುಂಠಿತ ಗೊಳಿಸಿ ಜನರ ಜೀವನ ಮಟ್ಟ ಕುಸಿಯುವಂತೆ ಮಾಡಿ ಜನರ ನೆಮ್ಮದಿ ಹಾಳು ಮಾಡುತ್ತವೆ ಎಂದು ಹೇಳುತ್ತಾ ಎಲ್ಲರ ನಡುವೆ ಸಮನ್ವಯ ಸಾಧಿಸುವುದು ತುಂಬಾ ತುಂಬಾ ಕಷ್ಟದ ಕೆಲಸ.

ಟೋಪಿ ಹಾಕಿದ ಮುಸ್ಲಿಂ, ನಾಮ ಹಾಕಿದ ಹಿಂದೂ, ಕ್ರಾಸ್ ಹಾಕಿದ ಕ್ರಿಶ್ಚಿಯನ್, ಮಾಂಸ ತಿನ್ನುವ ಇನ್ನೊಬ್ಬರು, ಮಾಂಸ ತಿನ್ನದ ಇನ್ನೊಬ್ಬರು ಎಲ್ಲರೂ ನಾವೇ ಶ್ರೇಷ್ಠ ಎನ್ನುವ ಮನಸ್ಥಿತಿ ರಕ್ತಗತವಾಗಿರುವಾಗ ವಿಶ್ವ ಮಾನವ ಪ್ರಜ್ಞೆ ಮತ್ತು ಭಾರತೀಯ ನಾಗರಿಕ ಪ್ರಜ್ಞೆಯ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಕಠಿಣ ಪರಿಶ್ರಮ.

ಇವರನ್ನು ಅವರು ನಂಬುವುದಿಲ್ಲ, ಅವರನ್ನು ಇವರು ನಂಬುವುದಿಲ್ಲ, ಇದನ್ನು ಸಮನ್ವಯ ಗೊಳಿಸಲು ಪ್ರಯತ್ನಿಸುವವರನ್ನು ಯಾರೂ ನಂಬುವುದಿಲ್ಲ. ಆದರೆ ಮಾನವೀಯ ಮೌಲ್ಯಗಳಲ್ಲಿ ಶುದ್ಧತೆ ಸರಳತೆ ಒಳ್ಳೆಯತನ ಬದುಕನ್ನು ಸಾರ್ಥಕತೆಯೆಡಗೆ ಕೊಂಡೊಯ್ಯುವ ಒಂದು ಅಂತರ್ಗತ ಶಕ್ತಿ ಇದೆ. ಮಾನವೀಯ ಮೌಲ್ಯಗಳು ವಿನಾಶದ ಅಂಚಿಗೆ ತಲುಪಿರುವ ಈ ಸಂದರ್ಭದಲ್ಲಿ, ಕೊರೋನಾ ಎಂಬ ಸಾಂಕ್ರಾಮಿಕ ರೋಗ ಬದುಕಿನ ನಶ್ವರತೆಯ ಬಗ್ಗೆ ನೆನಪಿಸುತ್ತಿರುವ ಈ ಸನ್ನಿವೇಶದಲ್ಲಿ ನಿಧಾನವಾಗಿ ನಿಜ ಮಾನವರು ಈ ಸಮಾಜದ ಮುಖ್ಯ ವಾಹಿನಿಗೆ ಬರುವ ವಾತಾವರಣ ಸೃಷ್ಟಿಯಾಗುತ್ತಿದೆ. ಶ್ರಮ ಜೀವಿಗಳು ಮತ್ತೆ ಮುನ್ನಲೆಗೆ ಬರಬಹುದು. ಪ್ರಾಮಾಣಿಕರು ಮತ್ತೆ ಪ್ರಾಮುಖ್ಯತೆ ಪಡೆಯಬಹುದು. ಒಳ್ಳೆಯವರು ಮತ್ತೆ ಮುನ್ನಡೆಯಬಹುದು. ಆ ಆಶಯದೊಂದಿಗೆ ಈ ಕಾಲ್ನಡಿಗೆ ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಾಗಿದೆ.

ವೈಯಕ್ತಿಕವಾಗಿ ಆರ್ಥಿಕ ಕೌಟುಂಬಿಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಏನೇ ಇರಲಿ ಸಮಾಜದಲ್ಲಿ ಮತ್ತೆ ಮಾನವೀಯ ಮೌಲ್ಯಗಳು ಪುನರ್ ಸ್ಥಾಪಿಸುವ ಕನಸಿನೊಂದಿಗೆ ಈ ಪ್ರಯಾಣ ನಿರಂತರವಾಗಿ ಮುಂದುವರಿಯುತ್ತದೆ………

ಸಾಕಷ್ಟು ಕಷ್ಟ ನೋವು ಅವಮಾನಗಳು ಆಗುತ್ತಿದ್ದರೂ ಅದನ್ನು ನುಂಗಿಕೊಂಡು ಮುನ್ನಡೆಯುವ ಆತ್ಮವಿಶ್ವಾಸ ಈ ಪಯಣ ನೀಡಿದೆ. ಜನರ ಮನಸ್ಸಿನಾಳದ ಒಳ್ಳೆಯತನ ಜಾಗೃತ ಗೊಳಿಸುವ ಭರವಸೆ ಈ ಯಾತ್ರೆ ನೀಡಿದೆ. ಇನ್ನೂ ಸಾಕಷ್ಟು ದೂರ ಚಲಿಸಬೇಕಿದೆ.

ಇದು ಇನ್ನೂ ತಾಯಿ ಹೊಟ್ಟೆಯೊಳಗಿನ ಗರ್ಭ ಮಾತ್ರ. ಈಗಲೇ ಏನನ್ನೂ ಹೇಳಲಾಗದು. ಎಲ್ಲಕ್ಕೂ ಸಮಯವೇ ಉತ್ತರಿಸುತ್ತದೆ…….


ಇಲ್ಲಿಯವರೆಗಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆಯ ಒಂದು ಪಕ್ಷಿನೋಟ……

BIDER


ವನಮಾರ್ಪಳ್ಳಿ – ಔರಾದ್,
ಔರಾದ್ – ಕಮಲನಗರ,
ಕಮಲನಗರ – ಬಾಲ್ಕಿ,
ಬಾಲ್ಕಿ – ಹುಲಸೂರು,
ಹುಲುಸೂರು – ಬಸವಕಲ್ಯಾಣ,
ಬಸವಕಲ್ಯಾಣ – ಹುಮ್ನಾಬಾದ್,
ಹುಮ್ನಾಬಾದ್ – ಚಿಟಗುಪ್ಪ,
ಚಿಟಗುಪ್ಪ – ಹಳ್ಳಿಖೇಡ್ ಬಿ,
ಹಳ್ಳಿಖೇಡ್ – ಬಸವಗಿರಿ ( ಬೀದರ್ )
ಬೀದರ್ – ವಿಠ್ಠಲ ಪುರ,

KALABURAGI


ವಿಠ್ಠಲ ಪುರ – ಚಿಂಚೋಳಿ,
ಚಿಂಚೋಳಿ – ಕಾಳಗಿ,
ಕಾಳಗಿ – ಕಮಲಾಪುರ,
ಕಮಲಾಪುರ – ಕಲಬುರಗಿ,
ಕಲಬುರಗಿ – ಕಡಗಂಚಿ,( ಕೇಂದ್ರೀಯ ವಿಶ್ವವಿದ್ಯಾಲಯ)
ಕಡಗಂಚಿ – ಆಳಂದ,
ಆಳಂದ – ನಿಂಬರ್ಗಾ,
ನಿಂಬರ್ಗಾ – ಅಫಜಲಪುರ,
ಅಫಜಲಪುರ – ಕೋಳೂರು,ಗುಡ್ಡೇವಾಡಿ,
ಗುಡ್ಡೇವಾಡಿ – ಯಡ್ರಾಮಿ,
ಯಡ್ರಾಮಿ – ಸೊನ್ನ,
ಸೊನ್ನ – ಜೇವರ್ಗಿ,
ಜೇವರ್ಗಿ – ವಾಡಿ,
ವಾಡಿ – ಚಿತ್ತಾಪೂರ,
ಚಿತ್ತಾಪೂರ – ಸೇಡಂ,

YADAGIRI


ಸೇಡಂ – ಗುರುಮಿಠಕಲ್,
ಗುರುಮಿಠಕಲ್ – ಯಾದಗಿರಿ,
ಯಾದಗಿರಿ – ಶಹಾಪುರ,
ಶಹಾಪುರ – ಸುರಪುರ – ದೇವರ ಗೋನಾಳ್,
ದೇವರ ಗೋನಾಳ – ಕೆಂಭಾವಿ,
ಕೆಂಭಾವಿ – ಹುಣಸಗಿ,
ಹುಣಸಗಿ – ಜಾಲಹಳ್ಳಿ,

RAYACHURU


ಜಾಲಹಳ್ಳಿ – ದೇವದುರ್ಗ,
ದೇವದುರ್ಗ – ಗಬ್ಬೂರು,
ಗಬ್ಬೂರು – ರಾಯಚೂರು ನಗರ,
ರಾಯಚೂರು – ಸಿರಿವಾರ,
ಸಿರಿವಾರ – ಮಾನ್ವಿ,
ಮಾನ್ವಿ – ಸಿಂಧನೂರು,
ಸಿಂಧನೂರು – ಮಸ್ಕಿ,
ಮಸ್ಕಿ – ವಟಗಲ್,
ವಟಗಲ್ – ಹಟ್ಟಿ,
ಹಟ್ಟಿ – ಲಿಂಗಸಗೂರು,

BIJAPURA


ಲಿಂಗಸಗೂರು – ನಾಲತವಾಡ,
ನಾಲತವಾಡ – ಮುದ್ದೇಬಿಹಾಳ,
ಮುದ್ದೇಬಿಹಾಳ – ತಾಳಿಕೋಟೆ,
ತಾಳಿಕೋಟೆ – ಮಿಣಜಗಿ,
ಮಿಣಜಗಿ – ಬ್ಯಾಕೋಡ,
ಬ್ಯಾಕೋಡ – ಬಸವನ ಬಾಗೇವಾಡಿ ( ಇಂಗಳೇಶ್ವರ )
ಇಂಗಳೇಶ್ವರ – ದೇವರ ಹಿಪ್ಪರಗಿ,
ದೇವರ ಹಿಪ್ಪರಗಿ – ಸಿಂದಗಿ,
ಸಿಂದಗಿ – ಆಲಮೇಲ,
ಅಲಮೇಲ – ಇಂಡಿ,
ಇಂಡಿ – ಚಡಚಣ,
ಚಡಚಣ – ಅರಕೇರಿ,
ಅರಕೇರಿ – ವಿಜಯಪುರ,
ವಿಜಯಪುರ – ತಿಕೋಟಾ,
ತಿಕೋಟಾ – ಬಬಲೇಶ್ವರ,
ಬಬಲೇಶ್ವರ – ಕೊಲ್ಹಾರ,
ಕೊಲ್ಹಾರ – ಮುತ್ತಗಿ,
ಮುತ್ತಗಿ – ಯರನಾಳ,
ಯರನಾಳ – ನಿಡಗುಂದಿ,
ನಿಡಗುಂದಿ – ಆಲಮಟ್ಟಿ,

BAGALAKOTE


ಆಲಮಟ್ಟಿ – ಕೂಡಲ ಸಂಗಮ,
ಕೂಡಲ ಸಂಗಮ – ಹುನಗುಂದ – ಇಳಕಲ್,
ಇಳಕಲ್ – ಪಟ್ಟದಕಲ್ಲು,
ಪಟ್ಟದಕಲ್ಲು – ಬಾದಾಮಿ,
ಬಾದಾಮಿ – ಗುಳೇದಗುಡ್ಡ,
ಗುಳೇದಗುಡ್ಡ – ಬಾಗಲಕೋಟೆ,
ಬಾಗಲಕೋಟೆ – ಬೀಳಗಿ,
ಬೀಳಗಿ – ಮುಧೋಳ,
ಮುಧೋಳ – ಜಮಖಂಡಿ,
ಜಮಖಂಡಿ – ಮಹಾಲಿಂಗಪುರ ( ಬನಹಟ್ಟಿ / ರಬಕವಿ )
ಮಹಾಲಿಂಗಪುರ – ತೇರದಾಳ,

BELAGAVI


ತೇರದಾಳ – ಅಥಣಿ,
ಅಥಣಿ – ಮೋಳೆ
ಮೋಳೆ – ಕಾಗವಾಡ,
ಕಾಗವಾಡ – ರಾಯಭಾಗ,
ರಾಯಭಾಗ – ಚಿಕ್ಕೋಡಿ,
ಚಿಕ್ಕೋಡಿ – ನಿಪ್ಪಾಣಿ,
ನಿಪ್ಪಾಣಿ – ಸಂಕೇಶ್ವರ,
ಸಂಕೇಶ್ವರ – ಹುಕ್ಕೇರಿ,
ಹುಕ್ಕೇರಿ – ಘಟಪ್ರಭಾ,
ಘಟಪ್ರಭಾ – ಗೋಕಾಕ್,
ಗೋಕಾಕ್ – ಮೂಡಲಗಿ,
ಮೂಡಲಗಿ – ಹುಲಕುಂದ,
ಹುಲಕುಂದ – ರಾಮದುರ್ಗ,
ರಾಮದುರ್ಗ – ಸವದತ್ತಿ,
ಸವದತ್ತಿ – ಬೈಲಹೊಂಗಲ,
ಬೈಲಹೊಂಗಲ – ಬೆಳಗಾವಿ ನಗರ,
ಬೆಳಗಾವಿ ನಗರ – ಖಾನಾಪುರ,
ಖಾನಾಪುರ – ಬೈಲೂರು,
ಬೈಲೂರು – ಕಿತ್ತೂರು,

DARAWAD


ಕಿತ್ತೂರು – ಧಾರವಾಡ,
ಧಾರವಾಡ – ಹುಬ್ಬಳ್ಳಿ,
ಹುಬ್ಬಳ್ಳಿ – ಕಲಘಟಗಿ,
ಕಲಘಟಗಿ – ಕುಂದಗೋಳ,
ಕುಂದಗೋಳ – ಅಣ್ಣಿಗೇರಿ,
ಅಣ್ಣಿಗೇರಿ – ನವಲಗುಂದ,

GADAG


ನವಲಗುಂದ – ನರಗುಂದ,
ನರಗುಂದ – ಯಾವಗಲ್,
ಯಾವಗಲ್ – ಬೆಳವಣಿಕಿ,
ಬೆಳವಣಿಕಿ – ರೋಣ,
ರೋಣ – ಗಜೇಂದ್ರಗಡ,
ಗಜೇಂದ್ರಗಡ – ನರೇಗಲ್,
ನರೇಗಲ್ – ಗದಗ,
ಗದಗ – ಲಕ್ಷ್ಮೇಶ್ವರ,
ಲಕ್ಷ್ಮೇಶ್ವರ – ಶಿರಹಟ್ಟಿ,
ಶಿರಹಟ್ಟಿ – ಬಾಗೇವಾಡಿ,
ಬಾಗೇವಾಡಿ – ಮುಂಡರಗಿ,
ಮುಂಡರಗಿ – ಕೊಪ್ಪಳ ನಗರ.

KOPPALA


ಕೊಪ್ಪಳ ನಗರ – ಕುಕನೂರು,
ಕುಕನೂರು – ಯಲಬುರ್ಗಾ,
ಯಲಬುರ್ಗಾ – ಕುಷ್ಟಗಿ,
ಕುಷ್ಟಗಿ – ಕನಕಗಿರಿ,
ಕನಕಗಿರಿ – ಗಂಗಾವತಿ,
ಗಂಗಾವತಿ – ಕಾರಟಗಿ,
ಕಾರಟಗಿ – ಶ್ರೀರಾಮ ನಗರ ( ದೇಸಾಯಿ ಕ್ಯಾಂಪ್ )
ಶ್ರೀರಾಮ ನಗರ – ಕಂಪ್ಲಿ.

BELLARY – VIJAYANAGARA


ಕಂಪ್ಲಿ – ನಡವಿ,
ನಡವಿ – ಸಿರಗುಪ್ಪ,
ಸಿರಗುಪ್ಪ – ಕುರುಗೋಡು,
ಕುರುಗೋಡು – ಬಳ್ಳಾರಿ ನಗರ,
ಬಳ್ಳಾರಿ ನಗರ – ಕುಡತಿನಿ,
ಕುಡತಿನಿ – ತೋರಣಗಲ್ಲು,
ತೋರಣಗಲ್ಲು – ಹಂಪಿ,
ಹಂಪಿ – ಹೊಸಪೇಟೆ,
ಹೊಸಪೇಟೆ – ಸಂಡೂರು,
ಸಂಡೂರು – ಕೂಡ್ಲಿಗಿ,
ಕೊಟ್ಟೂರು – ಹಗರಿ ಬೊಮ್ಮನಹಳ್ಳಿ
ಹಗರಿ ಬೊಮ್ಮನಹಳ್ಳಿ – ಉತ್ತಂಗಿ,
ಉತ್ತಂಗಿ – ಹೂವಿನ ಹಡಗಲಿ,
ಹೂವಿನ ಹಡಗಲಿ – ಹರಪನಹಳ್ಳಿ,
ಹರಪನಹಳ್ಳಿ – ಅರಿವೆ ಸಿದ್ದಾಪುರ,

HAVERI


ಅರಿವೆ ಸಿದ್ದಾಪುರ – ರಾಣೆಬೆನ್ನೂರು
ರಾಣೆಬೆನ್ನೂರು – ರಟ್ಟೆಹಳ್ಳಿ,
ರಟ್ಟೆಹಳ್ಳಿ – ಸರ್ವಜ್ಞನ ಮಾಸೂರು,
ಮಾಸೂರು – ಹಿರೇಕೆರೂರು,
ಹಿರೇಕೆರೂರು – ಬ್ಯಾಡಗಿ,
ಬ್ಯಾಡಗಿ – ಹಾವೇರಿ ನಗರ,
ಹಾವೇರಿ ನಗರ – ಸವಣೂರು,
ಸವಣೂರು – ಶಿಗ್ಗಾಂವ್,
ಶಿಗ್ಗಾಂವ್ – ಹಾನಗಲ್,

UTTARA KANNADA


ಹಾನಗಲ್ – ಮುಂಡಗೋಡ,
ಮುಂಡಗೋಡ – ಬಿಸಿಲೆಕೊಪ್ಪ ( ಎಕ್ಕುಂಬಿ )
ಎಕ್ಕುಂಬಿ – ಸಿರಸಿ,
ಸಿರಸಿ – ಉಮ್ಮಜಗಿ,
ಉಮ್ಮಜಗಿ – ಯಲ್ಲಾಪುರ,
ಯಲ್ಲಾಪುರ – ಭಾಗವತಿ,
ಭಾಗವತಿ – ಹಳಿಯಾಳ,
ಹಳಿಯಾಳ – ದಾಂಡೇಲಿ,
ದಾಂಡೇಲಿ – ಜೋಯಿಡಾ,
ಜೋಯಿಡಾ – ಕದ್ರ,
ಕದ್ರ – ಕಾರವಾರ ನಗರ,
ಕಾರವಾರ ನಗರ – ಅಂಕೋಲ,
ಅಂಕೋಲ – ಕುಮಟಾ,
ಕುಮಟಾ – ಹೊನ್ನಾವರ,
ಹೊನ್ನಾವರ – ಮುರುಡೇಶ್ವರ,
ಮುರುಡೇಶ್ವರ – ಭಟ್ಕಳ,
ಭಟ್ಕಳ – ಇಡಗುಂಜಿ,
ಇಡಗುಂಜಿ – ಗೇರುಸೊಪ್ಪ,
ಗೇರುಸೊಪ್ಪ – ಮಾವಿನಗುಂಡಿ,
ಮಾವಿನಗುಂಡಿ – ಸಿದ್ದಾಪುರ,

SHIVAMOGGA


ಸಿದ್ದಾಪುರ – ಸೊರಬ,
ಸೊರಬ – ಶಿರಾಳಕೊಪ್ಪ,
ಶಿರಾಳಕೊಪ್ಪ – ಶಿಕಾರಿಪುರ,
ಶಿಕಾರಿಪುರ …..……


  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!