February 22, 2026

Newsnap Kannada

The World at your finger tips!

sidda

Pic Credits : deccanherald.com

ಜಮೀರ್ ಜತೆ ಮುನಿಸಿಲ್ಲ ಸಂಬಂಧವೂ ಚೆನ್ನಾಗಿದೆ: ಸಿದ್ದರಾಮಯ್ಯ

Spread the love

ತಮ್ಮ ಮತ್ತು ಜಮೀರ್ ಮಧ್ಯೆ ಯಾವ ಮುನಿಸು, ಭಿನ್ನಾಭಿಪ್ರಾಯವೂ ಇಲ್ಲ. ಸಂಬಂಧವೂ ಚೆನ್ನಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಜಮೀರ್ ಅವರನ್ನು ನಾನು ಭೇಟಿಯಾಗದೇ ಇರುವುದಕ್ಕೆ ಹಾಗೂ ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಶಾಸಕರ ಮನೆಗೆ ಹೋಗಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡಿ ಎಂದು ಹೇಳಿದರು. ‌

ಬೆಂಗಳೂರಿನ ಜಮೀರ್ ನಿವಾಸದ ಮೇಲೆ ಇಡಿ ದಾಳಿ ನಡೆದ ನಂತರ ಆತ್ಮೀಯರಾದ ಸಿದ್ದರಾಮಯ್ಯ ಅಂತರ ಕಾಯ್ದುಕೊಂಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದಕ್ಕೆ ಸಿದ್ದರಾಮಯ್ಯ ತೆರೆ ಎಳೆದರು.

error: Content is protected !!