ಕವಿ ಎನ್.‌ಎಸ್. ಲಕ್ಷ್ಮೀ ನಾರಾಯಣ ಭಟ್ಟರು ಇನ್ನಿಲ್ಲ

Team Newsnap
1 Min Read

ಕನ್ನಡ ಭಾವಗೀತೆ ಗಳಿಗೆ ಜೀವ ತುಂಬಿರುವ ಎಲ್ಲರಿಗೂ ಸಲ್ಲುವ ಕವಿ ಎಂದೇ ಪ್ರಸಿದ್ದರಾಗಿದ್ದ ಖ್ಯಾತ ಕವಿ ಎನ್.‌ಎಸ್. ಲಕ್ಷ್ಮೀ ನಾರಾಯಣ ಭಟ್ಟರು ಶನಿವಾರ ನಿಧನರಾದರು.

1936ರ ನವೆಂಬರ್ 29ರಂದು ಶಿವಮೊಗ್ಗದಲ್ಲಿ ಜನಿಸಿದ್ದ ನೈಲಾಡಿ ಶಿವರಾಮ ಲಕ್ಷ್ಮೀ ನಾರಾಯಣ ಭಟ್ಟ ಕನ್ನಡ ಭಾವಗೀತೆಗಳ ಲೋಕದಲ್ಲಿ ಸಾಕಷ್ಟು ಸಾಧನೆ ಮಾಡಿದವರು.

n s l2

ಬೆಂಗಳೂರಿನಲ್ಲಿ ಕಾಲೇಜು ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ಭಟ್ಟರು ನಂತರ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

ಹಿಂದೆ ಹೀಗೆ ಚಿಮ್ಮುತ್ತಿತ್ತು ಯಾವ ಘಳಿಗೆಯಲ್ಲಿ, ನೀರ ಮೇಲಿನ ಲೀಲೆ, ನಿತ್ಯ ನಿತ್ಯ ಭೂಮಿ, ಮಾಗಿ ಕೊರೆವ ಬಾಳಿಗೆ ಮುಂತಾದ ಭಾವಗೀತೆಗಳು ಪ್ರಸಿದ್ದಿಯಾಗಿದ್ದವು.

ವೃತ್ತಿ, ಸುಳಿ, ನಿನ್ನದೆ ನನ್ನ ಮಾತು, ಹೊಳೆಯ ಸಾಲಿನ ಮರ, ಪಾಂಚಾಲಿ, ಅರುಣಗೀತೆ, ಚಿತ್ರಕೂಟ, ದೀಪಿಕಾ, ಬಾರೋ ವಸಂತ, ಸುನೀತಾ ಕವನ ಸಂಕಲನಗಳನ್ನು ಲಕ್ಷ್ಮೀ ನಾರಾಯಣ ಭಟ್ಟರು ಹೊರ ತಂದಿದ್ದರು.

Share This Article
Leave a comment