January 30, 2026

Newsnap Kannada

The World at your finger tips!

mamath banrgi

ಪೈಲೆಟ್​ ಸಮಯ ಪ್ರಜ್ಞೆಯಿಂದ ಬದುಕಿದೆ- ಆಘಾತಕಾರಿ ಸಂಗತಿ ಬಹಿರಂಗ ಮಾಡಿದ – ಮಮತಾ

Spread the love

ತಾವು ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಮತ್ತೊಂದು ವಿಮಾನವು ಡಿಕ್ಕಿಯಾಗುವಷ್ಟು ಹತ್ತಿರಕ್ಕೆ ಬಂದಿತ್ತು, ನಮ್ಮ ವಿಮಾನದ ಪೈಲಟ್ ಸಮಯಪ್ರಜ್ಞೆಯಿಂದ ದುರಂತ ತಪ್ಪಿತು ಅಂತ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಘಾತಕಾರಿ ವಿಷಯ ಬಹಿರಂಗ ಪಡಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಪರ ಪ್ರಚಾರ ನಡೆಸಿ ವಾಪಸ್ ಬಂಗಾಳಕ್ಕೆ ತೆರಳುವ ವೇಳೆ ಘಟನೆ ಸಂಭವಿಸಿದೆ ಅಂತ ಮಮತಾ ಹೇಳಿದ್ದಾರೆ.

ನನ್ನ ವಿಮಾನದ ಮುಂದೆ ಮತ್ತೊಂದು ವಿಮಾನ ಬಂತು. ಇನ್ನೇನು 10 ಸೆಕೆಂಡುಗಳಲ್ಲಿ ಎರಡೂ ವಿಮಾನಗಳು ಡಿಕ್ಕಿ ಹೊಡೆದುಕೊಳ್ಳಲಿದ್ದವು.

ಪೈಲಟ್‌ನ ಚಾಣಾಕ್ಷತದಿಂದ ನಾನು ಬದುಕಿದ್ದೇನೆ. ಪರಿಣಾಮ ವಿಮಾನ ಆರು ಸಾವಿರ ಅಡಿ ಕೆಳಗೆ ಇಳಿದಿತ್ತು. ನನ್ನ ಬೆನ್ನು ಮತ್ತು ಎದೆಗೆ ಗಾಯವಾಗಿದೆ. ನಾನಿನ್ನೂ ನೋವಿನಲ್ಲಿದ್ದೇನೆ

ಘಟನೆಯಲ್ಲಿ ಮಮತಾರ ಬೆನ್ನು ಮತ್ತು ಎದೆಗೆ ಗಾಯಗಳಾಗಿದ್ದು, ವರದಿ ನೀಡುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಪಶ್ಚಿಮ ಬಂಗಾಳ ಸರ್ಕಾರ ಸೂಚಿಸಿದೆ.

ಕಳೆದ ಶುಕ್ರವಾರ ಸಂಜೆ 10.3 ಟನ್ ತೂಕದ ಲಘು ವಿಮಾನ ಡಸಾಲ್ಟ್ ಫಾಲ್ಕನ್-2000 ರಲ್ಲಿ ಮಮತಾ ಬ್ಯಾನರ್ಜಿ ಉತ್ತರ ಪ್ರದೇಶದಿಂದ ಪಶ್ಚಿಮ ಬಂಗಾಳಕ್ಕೆ ವಾಪಸ್ ಆಗುತ್ತಿದ್ದರು.

ಈ ವೇಳೆ ಮತ್ತೊಂದು ವಿಮಾನ ಎದುರಿಗೆ ಬಂದ ಪರಿಣಾಮ ಆತಂಕ ಎದುರಾಗಿತ್ತು. ಈ ಚಾರ್ಟೆಡ್ ವಿಮಾನದಲ್ಲಿ ಇಬ್ಬರು ಅಟೆಂಡರ್ ಸೇರಿ ಒಟ್ಟು 19 ಮಂದಿ ಇದ್ದರು ಎನ್ನಲಾಗಿದೆ.

error: Content is protected !!