November 8, 2025

Newsnap Kannada

The World at your finger tips!

WhatsApp Image 2022 08 20 at 1.43.55 PM

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದ ವ್ಯಕ್ತಿ ಅಪ್ಪಚ್ಚು ರಂಜನ್ ಬೆಂಬಲಿಗ !

Spread the love

ಮೂರು ದಿನಗಳ ಹಿಂದೆ ಕೊಡಗು ಪ್ರವಾಸದಲ್ಲಿದ್ದ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದಿದ್ದ ವ್ಯಕ್ತಿಯ ಯಾವ ಪಕ್ಷಕ್ಕೆ ಸೇರಿದ್ದಾನೆ ಎಂಬ ಚರ್ಚೆ ನಡೆದಿರುವುವಾಗಲೇ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದ ವ್ಯಕ್ತಿಯನ್ನು ಪೊಲೀಸರು ಸ್ಥಳದಲ್ಲೇ ವಶಕ್ಕೆ ಪಡೆದುಕೊಂಡಿದ್ದಾರೆ

ಮೊಟ್ಟೆ ಎಸೆದ ವ್ಯಕ್ತಿಯನ್ನು ಕುಶಾಲನಗರದ ಗುಡ್ಡೆಹೊಸೂರಿ ಸೋಮವಾರಪೇಟೆಯ ಲೋಡರ್ಸ್ ಕಾಲೋನಿಯ ನಿವಾಸಿ ಎಂದು ಸಂಪತ್ ಎಂದು ಗುರುತಿಸಲಾಗಿದೆ.

ಎರಡು ವರ್ಷಗಳಿಂದ ಬಿಜೆಪಿಯಲ್ಲಿದ್ದಾನಂತೆ ಮಾಹಿತಿ ಲಭ್ಯವಾಗಿದೆ. ಸಣ್ಣಪುಟ್ಟ ಕಾಮಗಾರಿಗಳ ಗುತ್ತಿಗೆ ಕೆಲಸ ಮಾಡುತ್ತಿದ್ದ ಸಂಪತ್, ಇದಕ್ಕೂ ಮುನ್ನ ಕಾಂಗ್ರೆಸ್​​ ಪಕ್ಷದಲ್ಲಿದ್ದನಂತೆ.

ಮೊಟ್ಟೆ ಹೊಡೆಯುತ್ತಿದ್ದಂತೆ ಸ್ಥಳದಲ್ಲಿಯೇ ಕುಶಾಲನಗರ ಗ್ರಾಮಾಂತರ ಠಾಣೆ ಪಿಎಸ್ಐ ಚಂದ್ರಶೇಖರ್ ಅವರು, ಸಂಪತ್​​ನನ್ನು ಬಂಧನ ಮಾಡಿದ್ದರು.

ಆದರೆ ಅಂದೇ ರಾತ್ರಿ ಠಾಣೆಯಲ್ಲಿ ಜಾಮೀನು ನೀಡಿ ಶಾಸಕ ಅಪ್ಪಚ್ಚು ರಂಜನ್ ಬಿಡುಗಡೆ ಮಾಡಿಸಿಕೊಂಡು ಹೋಗಿದ್ದರಂತೆ. ಆದರೆ ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು ಮೊಟ್ಟೆ ಹೊಡೆದವರು ನಮ್ಮವರಲ್ಲ. ಪ್ರತಿಭಟನೆ ಮಾಡಿದ್ದು ನಮ್ಮವರೇ, ಆದರೆ ಮೊಟ್ಟೆ ಹೊಡೆದಿದ್ದು ಕಾಂಗ್ರೆಸ್ ಪಕ್ಷದವರೇ. ಆದರೆ ಆತ ನಾಪತ್ತೆಯಾಗಿದ್ದಾನೆ ಎಂದಿದ್ದರು.

error: Content is protected !!