March 13, 2026

Newsnap Kannada

The World at your finger tips!

tree kalla

ತೆಂಗಿನಕಾಯಿ ಕದ್ದ ಕಳ್ಳನನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ ತೋಟದ ಮಾಲೀಕ

Spread the love

ತೋಟದಲ್ಲಿ ತೆಂಗಿನ ಕಾಯಿ ಕದ್ದ ಹರೀಶ್ ಎಂಬ ವ್ಯಕ್ತಿಯ ಮೇಲೆ ಮಾಲೀಕನೇ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಜರುಗಿದೆ

ತೋಟದ ಮಾಲೀಕ ರಾಜು ಎಂಬುವವರು ತೆಂಗಿನ ಕಾಯಿ ಕದ್ದ ಹರೀಶ್​ನನ್ನು ವಿದ್ಯುತ್​ ಕಂಬಕ್ಕೆ ಕಟ್ಟಿಹಾಕಿ ದೊಣ್ಣೆಯಿಂದ ಹಿಗ್ಗಾಮುಗ್ಗ ತಳಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಈ ಅಮಾನವೀಯ ಕೃತ್ಯ ವೈರಲ್​ ಆಗುತ್ತಿದಂತೆ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ ತೋಟದ ಮಾಲೀಕನ ವಿರುದ್ಧ ದೂರು ದಾಖಲಿಸಿದೆ.

ಈ ವಿಷಯದ ಸಂಬಂಧವಾಗಿ ತುರುವೇಕೆರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!