February 21, 2026

Newsnap Kannada

The World at your finger tips!

g s

ಗ್ರಾಪಂ‌ ಚುನಾವಣೆಯಲ್ಲಿ ಸೋತ ವ್ಯಕ್ತಿ ನೊಂದು ಆತ್ಮಹತ್ಯೆ

Spread the love

ಚುನಾವಣೆಯಲ್ಲಿ ಸೋತ ಕಾರಣಕ್ಕಾಗಿ ವ್ಯಕ್ತಿ ತೀವ್ರ ನಿರಾಶೆಗೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಖಂಡೇನಹಳ್ಳಿ ಗ್ರಾಮದಲ್ಲಿ ಜರುಗಿದೆ.

ನರಸಿಂಹಮೂರ್ತಿ (26) ಎಂಬುವವರೇ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

ಕಳೆದ ವಾರ ನಡೆದ ಚುನಾವಣೆಯಲ್ಲಿ ಲಕ್ಷಾಂತರ ರು ಖರ್ಚು ಮಾಡಿಕೊಂಡಿ ದ್ದರು.ಕೆಲವು ಜನರು ಹಾಗೂ ಗೆಳೆಯರು, ಚುನಾವಣೆ ವೇಳೆ ಬೆಂಬಲಿಸುವ ಭರವಸೆ ನೀಡಿ ಸಾಕಷ್ಟು ಸಾಲ ಮಾಡಿಸಿ ಹಣ ವೆಚ್ಚ ಮಾಡಿಸಿದ್ದರು.‌

ಕೊನೆ ಘಳಿಗೆಯಲ್ಲಿ ಚುನಾವಣೆಯಲ್ಲಿ ಸೋಲುಂಟಾಯಿತು. ಈ ಹಿನ್ನೆಲೆಯಲ್ಲಿ ಮತದಾರರು ಹಾಗೂ ಮತದಾರರು ಕೈ ಕೊಟ್ಟ ಕಾರಣಕ್ಕಾಗಿ ನೊಂದು ನರಸಿಂಹಮೂರ್ತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನನೊಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಅಬ್ಬಿನ ಹೊಳೆ ಪಿಎಸ್ಐ ಲಮಾಣಿ ಭೇಟಿ ಪರಶೀಲನೆ ನಡೆಸಿದರು.

error: Content is protected !!