ಮೈಸೂರು :
ಮೊದಲರಾತ್ರಿಯಲ್ಲಿ ಪಾರ್ಶ್ವವಾಯುಗೆ ತುತ್ತಾದ ಪತಿಯ ಜೊತೆ 8 ವರ್ಷ ಸಂಸಾರ ನಡೆಸಿದ ಗೃಹಿಣಿಯೊಬ್ಬರು ನೇಣಿಗೆ ಶರಣಾದ ಘಟನೆ ಮೈಸೂರಿನ ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಾಸನ ಮೂಲದ ಶೃತಿ (28) ಮೃತ ದುರ್ದೈವಿ.
ಹಾಸನದ ಚಿಟ್ಟನಹಳ್ಳಿ ಗ್ರಾಮದ ಶೃತಿ 8 ವರ್ಷಗಳ ಹಿಂದೆ ಇಲವಾಲದ ಚಂದು ಎಂಬಾತನನ್ನು ವಿವಾಹವಾದರು.
ವೃತ್ತಿಯಲ್ಲಿ ಸೋಲಾರ್ ಮೆಕ್ಯಾನಿಕ್ ಆಗಿದ್ದ ಚಂದು ವಿವಾಹವಾದ ಮೊದಲ ರಾತ್ರಿಯಲ್ಲೇ ಪಾರ್ಶ್ವವಾಯುಗೆ ತುತ್ತಾದರು. ಆದರೂ ಎದೆಗುಂದದ ಚಂದು ಜೊತೆ ಶೃತಿ ಸಂಸಾರ ನಡೆಸಿ ಒಂದು ಮಗುವಿನ ತಾಯಿ ಆಗಿದ್ದರು.
ಕಳೆದ ಎರಡು ವರ್ಷಗಳಿಂದ ಚಂದುಗೆ ಪಾರ್ಶ್ವವಾಯು ಖಾಯಿಲೆ ಪ್ರಮಾಣ ಹೆಚ್ಚಾಗಿದೆ.ಮತ್ತೊಂದೆಡೆ ಶೃತಿಯ ಆರೋಗ್ಯ ಸಹ ಹಾಳಾಯಿತು. ಇದರಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿದ ಶೃತಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು