ಹಾಸನ : ಬಟ್ಟೆ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪತಿಯೇ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.
ಹುಬ್ಬಳ್ಳಿ ಮೂಲದ ಜ್ಯೋತಿ (22) ಕೊಲೆಯಾದ ಮಹಿಳೆ, ರಾಂಪುರ ಗ್ರಾಮದ ನಿವಾಸಿ ಜೀವನ್ (25) ಪತ್ನಿ ಕೊಲೆಗೈದ ಆರೋಪಿ.
ಜೀವನ್, ಜ್ಯೋತಿ ಈ ಹಿಂದೆ ಗಾರ್ಮೆಂಟ್ಸ್‌ನಲ್ಲಿ ಪರಸ್ಪರ ಕೆಲಸ ಮಾಡುತ್ತಿದ್ದಾಗಲೇ ಪ್ರೀತಿಸಿ ಮದುವೆಯಾಗಿದ್ದರು
ಶನಿವಾರ ಸಂಜೆಯು ಸಹ ಮಾಡ್ರನ್ ಡ್ರೆಸ್‌ಹಾಕಿಕೊಂಡು ಜ್ಯೋತಿ ಹೊರಗೆ ಹೊರಟಿದ್ದಳು. ಆಗಲೂ ಜೀವನ್ ವಿರೋಧಿಸಿದ್ದನು. ಆದರೂ ಬೈಕ್‌ನಲ್ಲಿ ಡ್ರಾಪ್ ಕೊಡುವುದಾಗಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದ ಜೀವನ್ ಚಾಕುವಿನಿಂದ ಕುತ್ತಿಗೆ ಕೊಯ್ದು ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ.
ಬಳಿಕ ಎಸ್ಕೇಪ್ ಆಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅರಸೀಕೆರೆ ತಾಲೂಕಿನ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಾಸನದ ಜೀವನ್ ಹಾಗೂ ಧಾರವಾಡದ ಜ್ಯೋತಿ ಅವರು ಪ್ರೀತಿಸಿ ಮದುವೆಯಾಗಿದ್ದರು. ಒಂದು ವರ್ಷದ ಹಿಂದಷ್ಟೇ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಜ್ಯೋತಿ ಅವರು ಮಾಡರ್ನ್ ಉಡುಪುಗಳನ್ನು ಧರಿಸುವುದು ಜೀವನ್‌ಗೆ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆಯೂ ಜಗಳಗಳು ನಡೆಯುತ್ತಿದ್ದವು.ಜನವರಿ 22 ರಂದು ರಾಮಮಂದಿರ ಲೋಕಾರ್ಪಣೆ
ಪತಿಯ ಆಕ್ಷೇಪದ ನಡುವೆಯೂ ಜ್ಯೋತಿ ಅವರು ತುಂಡುಡುಗೆ ಧರಿಸುತ್ತಿದ್ದರು. ಜೀವನ್ ಆಕ್ಷೇಪಕ್ಕೆ ಜ್ಯೋತಿ ಸೊಪ್ಪು ಹಾಕುತ್ತಿರಲಿಲ್ಲ ಎಂದು ತಿಳಿದುಬಂದಿದೆ.
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )