ಎರಡು ಹೆಣ್ಣು ಮಕ್ಕಳಾದ ಕಾರಣಕ್ಕಾಗಿ ಕೋರ್ಟ್ ಆವರಣದಲ್ಲೇ ಪತ್ನಿಯ ಕತ್ತು ಕೊಯ್ದು ಗಂಡ ಬರ್ಬರವಾಗಿ ಹತ್ಯೆ ಮಾಡಿದ ಭಯಾನಕ ಘಟನೆ ಹೊಳೆನರಸೀಪುರದಲ್ಲಿ ಶನಿವಾರ ಸಂಭವಿಸಿದೆ.
ಪತ್ನಿ ಚೈತ್ರಾಳನ್ನು ಕೊಂದವನೇ ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆ ಗ್ರಾಮದ ಶಿವಕುಮಾರ್. ಅಮಾನುಷವಾಗಿ ಪತ್ನಿಯ ಕತ್ತು ಪರಾರಿಯಾಗಲು ಯತ್ನಿಸಿದ್ದ ಈತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.ಇದನ್ನು ಓದಿ –ಮಂಡ್ಯ ವಾರ್ತಾ ಇಲಾಖೆ: ದೇಶ ಇಬ್ಭಾಗ ಕರಾಳ ನೆನಪಿನ ಛಾಯಾಚಿತ್ರ ಪ್ರದರ್ಶನ
ಹೊನಮಾರನಹಳ್ಳಿ ಗ್ರಾಮದ ಚೈತ್ರಾಳನ್ನು 7 ವರ್ಷದ ಹಿಂದೆ ಶಿವಕುಮಾರ್ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಎರಡೂ ಮಕ್ಕಳು ಹೆಣ್ಣು ಎಂಬ ಕಾರಣಕ್ಕೆ ಪತ್ನಿಗೆ ಚಿತ್ರಹಿಂಸೆ ಕೊಡುತ್ತಿದ್ದ.
ಕರೊನಾ ಲಾಕ್ಡೌನ್ ವೇಳೆ ದೊಡ್ಡ ಗಲಾಟೆಯೇ ಆಗಿತ್ತು. ಚೈತ್ರಾಳ ಸರ, ಕಿವಿಯೋಲೆ ಕಿತ್ತುಕೊಂಡು ಹಲ್ಲೆ ಮಾಡಿದ್ದ. ಅವನ ಕಾಟ ತಾಳಲಾರದೆ ಚೈತ್ರಾ ತವರು ಮನೆಯಲ್ಲೇ ಇದ್ದಳು. ಈಗ ಅವಳನ್ನೇ ಕೊಂದು ಹಾಕಿಬಿಟ್ಟ,ಗಂಡನಿಂದ ಜೀವನಾಂಶ ಕೋರಿ ಚೈತ್ರಾ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ವಿಚಾರವಾಗಿ ಇಂದು ಹೊಳೆನರಸೀಪುರ ಕೋರ್ಟ್ಗೆ ಚೈತ್ರಾ ಆಗಮಿಸಿದ್ದರು. ಮಧ್ಯಾಹ್ನ 12.30ರ ಸುಮಾರಿನಲ್ಲಿ ಕೋರ್ಟ್ ಆವರಣದ ಶೌಚಗೃಹಕ್ಕೆ ಚೈತ್ರಾ ತೆರಳಿದ್ದಾಗ ಹೊಂಚುಹಾಕಿ ಕಾಯುತ್ತಿದ್ದ ಶಿವಕುಮಾರ್, ಆಕೆಯ ಕತ್ತು ಕೊಯ್ದು ಪರಾರಿಯಾಗಲು ಯತ್ನಿಸಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಚೈತ್ರಾಳನ್ನು ಕೂಡಲೇ ಹಾಸನದ ಹಿಮ್ಸ್ ಆಸ್ಪತ್ರೆಗೆ ಕರೆತರಲಾಯಿತ್ತಾದರೂ ಬದುಕಲಿಲ್ಲ.
- ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
- ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ
- ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು
- ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
- ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
More Stories
ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ
ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !