December 23, 2024

Newsnap Kannada

The World at your finger tips!

yediyurappa 1

ಜುಲೈ ಅಂತ್ಯದಲ್ಲಿ ಸಂಪುಟ ಪುನರ್ ರಚನೆ ಹೈಕಮಾಂಡ್ ಒಪ್ಪಿಗೆ?

Spread the love

ಯೋಗೀಶ್ವರ್ ಅವರನ್ನು ಕೈ ಬಿಡುವ ಸಲುವಾಗಿ, ಸಚಿವ ಮೌಲ್ಯಮಾಪನ‌ ಹಾಗೂ ಪಕ್ಷ ಸಂಘಟನೆಯನ್ನು ಬಲಪಡಿಸುವ ನೆಪದಲ್ಲಿ ಸಂಪುಟ ಪುನರ್ ರಚನೆ ಮಾಡುವ ಸಿಎಂ ನಿರ್ಧಾರಕ್ಕೆ ನ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ ಎಂದು ಬಲ್ಲ ಮೂಲಗಳಿಂದ ಗೊತ್ತಾಗಿದೆ.

ಜುಲೈ ಅಂತ್ಯದ ವೇಳೆಗೆ ಸಂಪುಟ ಪುನರ್​ ರಚನೆಯಾಗುವ ಸಾಧ್ಯತೆ ಇದೆ.

ಸಚಿವರ ಮೌಲ್ಯಮಾಪನದ ಹೆಸರಲ್ಲಿ ಜುಲೈ ಅಂತ್ಯದಲ್ಲಿ ಕ್ಯಾಬಿನೇಟ್ ಪುನರ್ ರಚನೆ ಮಾಡಿ, ಒಂದೇ ಕಲ್ಲಲ್ಲಿ ಎರಡು ಹಕ್ಕಿಹೊಡೆಯಲು ಬಿಎಎಸ್​ವೈ ನಿರ್ಧರಿಸಿದ್ದಾರೆ.

ಒಂದು ಕಡೆ ಸಿಪಿ ಯೋಗಿಶ್ವರ್​ ಅವರನ್ನ ಸಚಿವ ಸ್ಥಾನದಿಂದ ಕೈಬಿಡೋದು. ಎರಡನೇಯದಾಗಿ ನಾಯಕತ್ವ ಬದಲಾವಣೆ ಕೂಗು ಹಾಕುವವರಿಗೆ ಖಡಕ್ ಸಂದೇಶ ರವಾನೆ ಮಾಡಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ.

Copyright © All rights reserved Newsnap | Newsever by AF themes.
error: Content is protected !!