ಬಿಪಿಎಲ್ ಪಡಿತರಕ್ಕೆ ಪ್ರತಿ ಕೆ ಜಿ ಗೆ 2 ರಿಂದ 3 ರು ದರ ನಿಗದಿ ಮಾಡಲು ಸರ್ಕಾರದ ಚಿಂತನೆ

Team Newsnap
1 Min Read
21 kg wheat and 14 kg rice from central for ration card holders? ಪಡಿತರ ಚೀಟಿದಾರರಿಗೆ ಇನ್ಮುಂದೆ ಕೇಂದ್ರದಿಂದ 21 ಕೆಜಿ ಗೋಧಿ ಮತ್ತು 14 ಕೆಜಿ ಅಕ್ಕಿ?

ರಾಜ್ಯದಲ್ಲಿನ ಬಿಪಿಎಲ್ ಪಡಿತರ ಚೀಟಿದಾರರು ಇನ್ನು ಮುಂದೆ ತಾವು ಪಡೆಯುವ ಅಕ್ಕಿ, ಗೋದಿಗೆ ಪ್ರತಿ ಕೆಜಿಗೆ 2 ರಿಂದ 3ರು ಬೆಲೆ ಕೊಡಬೇಕು.

ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡುದಾರರ ಪಡಿತರಕ್ಕೆ ಬೆಲೆ ನಿಗದಿ ಮಾಡಲು ಆಲೋಚನೆ ಮಾಡಿದೆ.

ಆ ಮೂಲಕ ಬಿಪಿಎಲ್ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಲಿದೆ.

ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಪಡೆಯುತ್ತಿರುವ ಅಕ್ಕಿ ಹಾಗೂ ಗೋಧಿಗೆ ಪ್ರತಿ ಕೆಜಿಗೆ 2 ರೂ. ನಿಂದ 3 ರೂ. ವರೆಗೆ ದರ ನಿಗದಿ ಮಾಡಲು ರಾಜ್ಯ ಸರ್ಕಾರದ ಚಿಂತನೆಯನ್ನು ಜಾರಿ ಮಾಡಲು ತಯಾರಿ ನಡೆಸಿದೆ.

ಬಿಪಿಎಲ್ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸುತ್ತಿರುವ ಅಕ್ಕಿ ಹಾಗೂ ಗೋಧಿ ಪ್ರತಿ ಕೆಜಿಗೆ 2 ರೂ. ನಿಂದ 3 ರೂ. ವರೆಗೆ ದರ ನಿಗದಿ ಮಾಡಲು ಆಹಾರ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಉಚಿತ ಅಕ್ಕಿ ನೀಡುವ ಬದಲು ಕನಿಷ್ಠ ದರ ನಿಗದಿ ಮಾಡುವುದು ಸೂಕ್ತ ಎಂದಿದ್ದಾರೆ. ಹಾಗಾಗಿ ದರ ನಿಗದಿಯ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ, ಬಜೆಟ್ ನಲ್ಲಿ ಈ ಯೋಜನೆ ಸೇರ್ಪಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಸರ್ಕಾರ ಬಡವರಿಗೆ ಬರೆ ಎಳೆಯಲು ಸಜ್ಜಾಗುತ್ತಿದೆ.

Share This Article
Leave a comment