ರಾಜ್ಯದ ರೈತರು ಸಹಕಾರ ಸಂಘ, ಸಹಕಾರ ಬ್ಯಾಂಕ್ ಗಳಿಂದ ಅಲ್ಪಾವಧಿ ಬೆಳೆ ಸಾಲ ಪಡೆದು 2018 ರ ಜುಲೈ 10 ಕ್ಕೆ ಹೊಂದಿರುವ ಬಾಕಿ ಗರಿಷ್ಠ 1 ಲಕ್ಷ ರು. ವರೆಗಿನ ಸಾಲ ಮನ್ನಾದ ಹಣ ಬಿಡುಗಡೆ ಮಾಡಿ ಸರ್ಕಾರ ಇಂದು ಆದೇಶ ಮಾಡಿದೆ.
ಸಹಕಾರ ಸಂಘಗಳ ನಿಬಂಧಕ ಎಸ್ ಜಿಯಾಉಲ್ಲಾ ಮುಖ್ಯಕಾರ್ಯನಿರ್ವಹಣಾಧಿಕಾರಿ ಗಳಿಗೆ ಈ ಕುರಿತಂತೆ ಪತ್ರ ಬರೆದಿದ್ದಾರೆ.
1 ಲಕ್ಷಗಳ ಸಾಲ ಮನ್ನಾ ಯೋಜನೆಗೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಸಾಲ ಮನ್ನಾ ವಿಶೇಷ ಕೋಷದಿಂದ 65,543 ರೈತರಿಗೆ ಸಂಬಂಧಿಸಿದಂತೆ ರೂ.350.16 ಕೋಟಿ ರುಗಳ ಹಸಿರು ಪಟ್ಟಿ ನೀಡಿದ್ದು, ಅದರ ಪಟ್ಟಿಯನ್ನು ಎಕ್ಸ್ ಎಲ್ ಶೀಟ್ ನಲ್ಲಿ ಈಗಾಗಲೇ ನೀಡಿದ್ದು, ಇದರಲ್ಲಿ ಅಪೆಕ್ಸ್ ಬ್ಯಾಂಕಿನಲ್ಲಿ ಲಭ್ಯವಿದ್ದ ರೂ.55.01 ಕೋಟಿಗಳ ಮೊತ್ತವನ್ನು ಗಡುವು ದಿನಾಂಕದ ಆಧಾರವಾಗಿ ಅನುದಾನ ಬಿಡುಗಡೆ ಮಾಡಲು ಉಲ್ಲೇಖ 2ರಲ್ಲಿ 8,313 ರೈತರ ಪಟ್ಟಿ ನೀಡಲಾಗಿತ್ತು.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ