November 16, 2024

Newsnap Kannada

The World at your finger tips!

vidan sabha

ಅತಿಥಿ ಉಪನ್ಯಾಸಕರಿಗೆ 28 ಸಾವಿರ ರುಗೆ ವೇತನ ಏರಿಕೆ ಮಾಡಿದ ಸರ್ಕಾರ

Spread the love

ರಾಜ್ಯದ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಸರ್ಕಾರ 11 ಸಾವಿರವಿದ್ದ ವೇತನವನ್ನು 28 ಸಾವಿರ ರುಗೆ ಏರಿಕೆ ಮಾಡಿದೆ.

ಅತಿಥಿ ಉಪನ್ಯಾಸಕರ ಬೇಡಿಕೆ ಮತ್ತು ಸಮಸ್ಯೆಯ ಕುರಿತುಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್​ ನಾರಾಯಣ್. ಅತಿಥಿ ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಒಂದು ಸಮಿತಿ ಮಾಡಲಾಗಿತ್ತು . ಅವರು ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ವರದಿಯನ್ನು ಸರ್ಕಾರಕ್ಕೆ ಕೊಟ್ಟಿದ್ದಾರೆ. ಅದರ ಪ್ರಕಾರ ವೇತನ ಏರಿಕೆ ಮತ್ತು ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.

ವೇತನವನ್ನು 11 ಸಾವಿರದಿಂದ 28 ಸಾವಿರಕ್ಕೆ ಪರಿಷ್ಕರಣೆ ಮಾಡಿದ್ದು ಪ್ರತಿ ವರ್ಷ ಆಯುಕ್ತಾಲಯದ ಮೂಲಕ ಆಯ್ಕೆ ಮಾಡಿಕೊಂಡು 10 ತಿಂಗಳು ವೇತನ ನೀಡಲಾಗುವುದು. ಇತರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರಿಗೆ ಉತ್ತಮ ವೇತನ ನೀಡಲಾಗ್ತಿದೆ. ಅತಿಥಿ ಉಪನ್ಯಾಸಕರ ಜೊತೆಯೂ ಮಾತನಾಡಲಾಗಿದೆ ಸೋಮವಾರದಿಂದ 5 ದಿನ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮುಷ್ಕರ ಅಂತ್ಯಗೊಳಿಸಿ, ಪಾಠ ಪ್ರವಚನ ಮುಂದುವರಿಸಿ ಎಂದು ಅವರು ಕೋರಿದ್ದಾರೆ. ಇನ್ನು ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವ ವಿಚಾರ ಸರ್ಕಾರದ ಮುಂದೆ ಇಲ್ಲ ಫುಲ್ ವರ್ಕ್ ಲೋಡ್ ನಲ್ಲಿ ಕೆಲಸ ಮಾತ್ರ ನೀಡಲಾಗುವುದು. ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಣೆಯಿಂದ ಸರ್ಕಾರದ ಖಜಾನೆಯ ಮೇಲೆ 3 ಪಟ್ಟು ಹೊರೆಯಾಗಲಿದೆ ಎಂದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!