February 21, 2026

Newsnap Kannada

The World at your finger tips!

vidansoudha

ಮುಂದಿನ ವರ್ಷ ಕಾಮೆಡ್ ಕೆ ಪರೀಕ್ಷೆ ರದ್ದಿಗೆ ಸರ್ಕಾರ ನಿರ್ಧಾರ – ಭಾರೀ ವಿರೋಧ

Spread the love

ಮುಂದಿನ ವರ್ಷದಿಂದ ಖಾಸಗಿ ಇಂಜಿನಿಯರಿಂಗ್​ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸೋ ಕಾಮೆಡ್​ ಕೆ ಪರೀಕ್ಷೆ ರದ್ಧು ಮಾಡಲು ಸರ್ಕಾರ ನಿರ್ಧರಿಸಿದೆ.

ಉನ್ನತ ಶಿಕ್ಷಣ ಸಚಿವರ ಈ ಹೇಳಿಕೆಗೆ, ಇದು ಏಕಪಕ್ಷೀಯ ನಿರ್ಧಾರ ಅಂತ ಕಾಮೆಡ್-ಕೆ ಕಾರ್ಯದರ್ಶಿ ಎಸ್. ಕುಮಾರ್​ ವಿರೋಧಿಸಿದ್ದಾರೆ. ನಮಗೆ ಮಾಹಿತಿಯೇ ನೀಡದೆ ಹೇಗೆ ವಿಲೀನ ಮಾಡ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರದ್ದು ಮಾಡುವ ಬಗ್ಗೆ ನಮ್ಮ ಜೊತೆ ಯಾವುದೇ ಸಭೆ ನಡೆಸಿಲ್ಲ. ರಾಜ್ಯ ಸರ್ಕಾರ ತನ್ನ ನಿರ್ಧಾರದ ಬಗ್ಗೆ ಪುನರ್ ಪರಿಶೀಲಿಸಬೇಕು. ಇಲ್ಲದಿದ್ರೆ ನಾವು ಕೋರ್ಟ್ ಮೊರೆ ಹೋಗುತ್ತೇವೆ ಅಂತ ಎಚ್ಚರಿಸಿದೆ.

2004ರಲ್ಲಿ ಸಂಸ್ಥೆ ರಚನೆ ಆಗಿದ್ದು, ಪ್ರತಿ ವರ್ಷ 70 ಸಾವಿರ ಅಭ್ಯರ್ಥಿಗಳು ಕಾಮೆಡ್-ಕೆ ಪರೀಕ್ಷೆಗೆ ನೊಂದಣಿ ಮಾಡಿಕೊಳ್ತಿದ್ದಾರೆ. 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮ್ಯಾನೇಜ್​​ಮೆಂಟ್ ಸೀಟ್​​ನ ಅಡಿಯಲ್ಲಿ ಇಂಜಿನಿಯರಿಂಗ್ ಕೋರ್ಸ್ ಪ್ರವೇಶ ಪಡೆಯುತ್ತಾರೆ. ಈ ಹಿನ್ನೆಲೆಯಲ್ಲಿ CET ಮೂಲಕ ದೇಶಾದ್ಯಂತ ಪರೀಕ್ಷೆಗಳನ್ನ ಸರ್ಕಾರ ಹೇಗೆ ನಡೆಸುತ್ತೆ? ಆದ್ದರಿಂದ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಅವೈಜ್ಞಾನಿಕ ಅಂತ ಕಾಮೇಡ್​ ಕೆ ಸಂಸ್ಥೆ ವಿರೋಧಿಸಿದೆ.

error: Content is protected !!