December 23, 2024

Newsnap Kannada

The World at your finger tips!

waterspoil

ಜಾಗತಿಕ ಜಲಕ್ಷಾಮ; ಪ್ರಥಮ 30 ನಗರಗಳಲ್ಲಿ ಬೆಂಗಳೂರು

Spread the love

ಜಾಗತಿಕವಾಗಿ ನೀರಿನ ಕೊರತೆ ಎದುರಿಸುತ್ತಿರುವ ಪ್ರಥಮ 30 ನಗರಗಳಲ್ಲಿ ಬೆಂಗಳೂರು ಒಂದು ಎಂದು ಜಾಗತಿಕ ತಾಪಮಾನ ಹಾಗೂ ಜಲಕ್ಷಾಮ ಕುರಿತು ಅಧ್ಯಯನ ಮಾಡುವ ಸಂಸ್ಥೆಯಾದ ಡಬ್ಲ್ಯೂ‌ಡಬ್ಲ್ಯೂಎಫ್ ಸಂಸ್ಥೆ ವರದಿ ಮಾಡಿದೆ.

ಜಾಗತಿಕವಾಗಿ ಒಟ್ಟು 100 ನಗರಗಳು ನೀರಿನ ಅಭಾವ ಎದುರಿಸುತ್ತಿವೆ. ಅದರಲ್ಲಿ 30 ನೇ ಸ್ಥಾನ ಬೆಂಗಳೂರು ಪಡೆದುಕೊಂಡಿದೆ. ‘2050ರ ವೇಳೆಗೆ ನೀರಿನ ಕೊರತೆಯಿಂದ ಬಳಲುವ ನಗರಗಳ ಸಂಖ್ಯೆ ಜಾಗತಿಕವಾಗಿ ಶೇ. 51% ಕ್ಕೆ ಏರಲಿದೆ’ ಎಂದು ವರದಿ ಹೇಳಿದೆ.

ಚೀನ, ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ, ಅಮೇರಿಕಾ, ಆಫ್ರಿಕಾಗಳು ಅತಿಯಾದ ನೀರಿನ ಕೊರತೆ ಎದುರಿಸುತ್ತಿವೆ. ಜಕಾರ್ತ, ಜೋಹಾನ್ಸ್ ಬರ್ಗ್, ಬೀಜಿಂಗ್, ಇಸ್ತಾಂಬುಲ್, ಹಾಂಗ್ ಕಾಂಗ್, ಮೆಕ್ಕ, ರಿಯೋ ಡಿ ಜನೈರೊ ಜಾಗತಿಕವಾಗಿ ಜಲದ ಕೊರತೆ ಎದುರಿಸುತ್ತಿರುವ ಪಟ್ಟಿಗಳಲ್ಲಿವೆ. ಭಾರತದಲ್ಲಿ ಜೈಪುರ, ಇಂಧೋರ್, ಅಮೃತಸರ, ಪುಣೆ, ಶ್ರೀನಗರ, ಕೋಲ್ಕತ್ತಾ, ಮುಂಬೈ, ವಿಶಾಖಪಟ್ಟಣಗಳ ಜೊತೆಗೆ ಬೆಂಗಳೂರೂ ಸಹ ಸೇರಿದೆ.

“ವೇಗ ನಗರೀಕರಣದ ಫಲವಾಗಿ ಭಾರತದ ಪ್ರಮುಖ ನಗರಗಳಲ್ಲಿ ಸದ್ಯಕ್ಕೆ ನೀರಿನ ಅಭಾವ ತಾಂಡವವಾಡುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಶೋಚನೀಯವಾಗಲಿದೆ. ಜಲಕ್ಷಾಮದ ಸಮಸ್ಯೆಯಿಂದ ದೂರ ಸರಿಯಲು ಭಾರತದ ನಗರಗಳಲ್ಲಿ ಜಲಾನಯನ ಪ್ರದೇಶಗಳ ವಿಸ್ತರಣೆ ಅಗತ್ಯವಿದೆ’ ಎಂದು ಡಬ್ಲ್ಯೂ‌ಡಬ್ಲ್ಯೂಎಫ್ ಇಂಡಿಯಾ ಕಾರ್ಯಕ್ರಮದ ಮುಖ್ಯಸ್ಥ ಡಾ. ಸೆಜೆಲ್ ವೋರಾ ತಿಳಿಸಿದರು.

Copyright © All rights reserved Newsnap | Newsever by AF themes.
error: Content is protected !!