December 19, 2024

Newsnap Kannada

The World at your finger tips!

marriage , cinema , story

The first wife to stop her husband's 2nd marriage by entering like movie .ಸಿನಿಮಾ ಮಾದರಿಯಲ್ಲಿ ಎಂಟ್ರಿಕೊಟ್ಟು ಪತಿಯ 2ನೇ ಮದುವೆ ನಿಲ್ಲಿಸಿದ ಮೊದಲ ಪತ್ನಿ !

ಸಿನಿಮಾ ಮಾದರಿಯಲ್ಲಿ ಎಂಟ್ರಿಕೊಟ್ಟು ಪತಿಯ 2ನೇ ಮದುವೆ ನಿಲ್ಲಿಸಿದ ಮೊದಲ ಪತ್ನಿ !

Spread the love

ಮಹಿಳೆಯೊಬ್ಬರು ತಮಗೆ ಮೋಸ ಆಗಿದೆ ಎಂದು ಆರೋಪಿಸಿ ಸಿನಿಮಾ ​ಮಾದರಿಯಲ್ಲಿ ಮದುವೆ ಸಮಾರಂಭಕ್ಕೆ ನುಗ್ಗಿ ಎರಡನೇ ಮದುವೆ ನಿಲ್ಲಿಸಿದ ಘಟನೆ ಬೂವನಹಳ್ಳಿ ಬಳಿಯ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಆರೋಪಿ ಕಿರಣ್​ಕುಮಾರ್ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಈಗಾಗಲೇ ಓರ್ವ ವಿಧವೆಯನ್ನು ಮದುವೆ ಮಾಡಿಕೊಂಡಿದ್ದರಂತೆ. ನಾಗಮಂಗಲದಲ್ಲಿ ದೇವಸ್ಥಾನದ ಕಳ್ಳತನ ತಪ್ಪಿಸಿದ ಸರ್ಪ – ನಾಗರಾಜನ ಮಹಿಮೆ

ಈ ವಿಚಾರವನ್ನು ಮುಚ್ಚಿಟ್ಟು ಇನ್ನೊಂದು ಹುಡುಗಿ ಜೊತೆ ಮದುವೆ ಆಗಲು ನಿಶ್ಚಯಿಸಿದ್ದರು. ಅದರಂತೆ ಕಲ್ಯಾಣ ಮಂಟಪದಲ್ಲಿ ಮದುವೆ ಶಾಸ್ತ್ರ ಕೂಡ ನಡೆದುಹೋಗಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ, ಮೊದಲನೇ ಪತ್ನಿ ಅಲ್ಲಿಗೆ ಬಂದು ರಂಪಾಟ ಮಾಡಿದ್ದಾಳೆ

ಎರಡು ವರ್ಷಗಳಿಂದ ತನ್ನನ್ನು ಮದುವೆಯಾಗೋದಾಗಿ ನಂಬಿಸಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಮನೆಯ ದೇವರ ಮುಂದೆ ತಾಳಿ ಕಟ್ಟಿದ್ದರು. ಈಗ ನೋಡಿದರೆ ಇನ್ನೊಂದು ಮದುವೆ ಮಾಡಿಕೊಂಡಿದ್ದಾರೆ ಎಂದು ಸಂತ್ರಸ್ತ ಮಹಿಳೆ, ಕಿರಣ್ ಕುಮಾರ್ ವಿರುದ್ಧ ಆರೋಪಿಸಿದ್ದಾಳೆ.

ಮೊದಲ ಪತ್ನಿ ಕಲ್ಯಾಣ ಮಂಟಪಕ್ಕೆ ಬಂದು ಗಲಾಟೆ ಮಾಡುತ್ತಿದ್ದಂತೆಯೇ, ನವ ವಿವಾಹಿತೆಗೆ ದೊಡ್ಡ ಆಘಾತ ಉಂಟಾಗಿದೆ. ಆಕೆಯ ಕುಟುಂಬಸ್ಥರೆಲ್ಲಾ ಸೇರಿ ನಡೆದು ಹೋಗಿದ್ದ ಮದುವೆಯನ್ನು ಮುರಿದುಕೊಂಡು ಮನೆಗೆ ಹೋಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

Copyright © All rights reserved Newsnap | Newsever by AF themes.
error: Content is protected !!