ದೇವರ ಮುಂದೆ ಹಚ್ಚಿಟ್ಟಿದ್ದ ದೀಪದಿಂದ ಬೆಂಕಿ ಹೊತ್ತಿಕೊಂಡು ಗುಡಿಸಲಿನಲ್ಲಿದ್ದ 3 ಲಕ್ಷ ನಗದು, ಚಿನ್ನ ಬೆಂಕಿಗಾಹುತಿಯಾಗಿ
ಸುಟ್ಟು ಕರಕಲಾದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಬಡಮಲ್ಲಿ ತಾಂಡಾದಲ್ಲಿ ನಡೆದಿದೆ.
ಗ್ರಾಮದ ಅಂಗನವಾಡಿ ಸಹಾಯಕಿ ವಿನೋದಾ ಎಂಬುವರು ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ದೇವರ ಮುಂದೆ ದೀಪ ಹಚ್ಚಿಟ್ಟು ಅಂಗನವಾಡಿಗೆ ಕೆಲಸಕ್ಕೆ ಹೋಗಿದ್ದರು.
ಕೆಲ ಹೊತ್ತಿನಲ್ಲಿ ದೀಪದ ಬೆಂಕಿ ಗುಡಿಸಲಿಗೆ ಆವರಿಸಿ ಗುಡಿಸಲಿನಲ್ಲಿದ್ದ ಮೂರು ಲಕ್ಷ ನಗದು ಹಣ ಮತ್ತು ಐವತ್ತು ಗ್ರಾಂ ತೂಕದ ಚಿನ್ನಾಭರಣ ಬೆಂಕಿಗೆ ಆಹುತಿಯಾಗಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ. ಹೊಸ ಮನೆಯ ನಿರ್ಮಾಣಕ್ಕಾಗಿ ಮನೆಯಲ್ಲಿ ಹಣವನ್ನು ಕೂಡಿ ಇಟ್ಟಿದ್ದರು. ಅದರೆ ಬೆಂಕಿಗೆ ಮನೆಯಲ್ಲಿ ಇದ್ದ ನಗದು ಸುಟ್ಟು ಇಡೀ ಕುಟುಂಬವೇ ಕಣ್ಣೀರು ಹಾಕುತ್ತಿದೆ.
ಸ್ಥಳಕ್ಕೆ ಕಾಗಿನೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
More Stories
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು