February 20, 2026

Newsnap Kannada

The World at your finger tips!

avali

ಕುಡಿದ ಮತ್ತಿನಲ್ಲೇ ಲಾರಿ ಚಲಾಯಿಸಿದ ಚಾಲಕ – ಅವಳಿ ಮಕ್ಕಳು ಸೇರಿ ತಾಯಿ ದುರಂತ ಸಾವು

Spread the love

ಕುಡಿದ ಮತ್ತಿನಲ್ಲಿ ಮನಬಂದಂತೆ ಲಾರಿ ಚಲಾಯಿಸಿದ ಚಾಲಕ, ಅಪಘಾತದ ನಂತರವೂ ಲಾರಿ ನಿಲ್ಲಿಸದೆ ವೇಗವಾಗಿ ಹೋಗಿದ್ದಾನೆ. ಇದರಿಂದ ಸುಮಾರು ಎರಡು ಕಿಲೋಮೀಟರ್ ದೂರದವರೆಗೂ ಬೈಕ್ ಅನ್ನು ಲಾರಿ ಎಳೆದುಕೊಂಡು ಹೋಗಿದೆ.

ಇದರಿಂದ ಲಾರಿಯ ಟಯರ್ ನಡಿ ಸಿಲುಕಿ ಸುಮಾರು ಎರಡು ಕಿಲೋಮೀಟರ್ ದೂರದವರೆಗೂ ಸಾಗಿದ ಮಗುವಿನ ದೇಹ ಛಿದ್ರಛಿದ್ರವಾಗಿದೆ. ಘಟನೆಯಿಂದ ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.

ಕುಡಿದ ಮತ್ತಿನಲ್ಲಿ ಲಾರಿ ಚಲಾಯಿಸಿ ಸರಣಿ ಅಪಘಾತ ಮಾಡಿದ ಚಾಲಕನಿಂದಾಗಿ ಇಬ್ಬರು ಮಕ್ಕಳ ಸಹಿತ ತಾಯಿ ದುರಂತ ಸಾವು ಕಂಡಿದ್ದಾರೆ.

ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಅವಳಿ ಮಕ್ಕಳಾದ ಪ್ರಣತಿ (3), ಪ್ರಣವ್(3) ಮತ್ತು ಜ್ಯೋತಿ ಮೃತರು.


.ತಂದೆ ಶಿವಾನಂದ್ ಹಾಗೂ ತಾಯಿ ಜ್ಯೋತಿ ಜೊತೆ ಮಕ್ಕಳು ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ಸುಮಾರು ನಾಲ್ಕು ಬೈಕ್ ಗಳಿಗೆ ಡಿಕ್ಕಿ ಹೊಡೆದ ಲಾರಿ ಚಾಲಕ, ಎರಡು ಪುಟ್ಟ ಮಕ್ಕಳಿದ್ದ ಬೈಕ್‍ಗೂ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಮಕ್ಕಳಿಬ್ಬರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ತಾಯಿ ಕೂಡ ಸಾವನ್ನಪ್ಪಿದ್ದಾರೆ ಗಂಭೀರವಾಗಿ ಗಾಯಗೊಂಡಿರುವ ಮಕ್ಕಳ ತಂದೆ ಶಿವಾನಂದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

error: Content is protected !!