January 15, 2025

Newsnap Kannada

The World at your finger tips!

deepa1

ಆತ್ಮ, ಮನಸ್ಸು, ಹೃದಯಗಳ ಪ್ರದರ್ಶನ ಮತ್ತು ಮಾರಾಟ

Spread the love

ಅಪ್ಪಟ ದೇಸೀ ನಿರ್ಮಾಣದ ವಿಭಿನ್ನ ಗುಣರೂಪಗಳ ಸಂಗ್ರಹ.

1). ರಾಜಕಾರಣಿ //………

ಆತ್ಮ ಕಪ್ಪಾಗಿದೆ, ಮನಸ್ಸು ನಂಬಲನರ್ಹ, ಹೃದಯ ಗಟ್ಟಿಯಾಗಿದೆ. ಈಗ 50 ವರ್ಷ ವಯಸ್ಸು. ಇನ್ನೂ 30 ವರ್ಷ ಗ್ಯಾರಂಟಿ.

2) ಸ್ವಾಮೀಜಿ // ………….

ಬಣ್ಣ ಬಣ್ಣದ ಆತ್ಮ, ಮನಸ್ಸು ಚಂಚಲ, ಹೃದಯ ಭದ್ರವಾಗಿದೆ. ಈಗ 60 ವರ್ಷ ವಯಸ್ಸು. ಇನ್ನೂ 30 ವರ್ಷ ಗ್ಯಾರಂಟಿ.

3). ಕ್ರೀಡಾಪಟು (ಗಂ/ಹೆ) //…….

ಆತ್ಮ ಕಪ್ಪು ಬಿಳುಪು, ಮನಸ್ಸಿನಲ್ಲಿ ಛಲ ತುಂಬಿದೆ. ಹೃದಯ ದೃಡವಾಗಿದೆ.ಈಗ ವಯಸ್ಸು 20. ಇನ್ನೂ 60 ವರ್ಷ ಗ್ಯಾರಂಟಿ.

4) ಪತ್ರಕರ್ತ/ಕರ್ತೆ //…………

ಆತ್ಮ ವಿವಿಧ ಬಣ್ಣ, ಮನಸ್ಸು ದುರಹಂಕಾರ, ಹೃದಯ ಪುಕ್ಕಲು. ಈಗ ವಯಸ್ಸು 35. ಇನ್ನು 35 ವರ್ಷ ಗ್ಯಾರಂಟಿ.

5) ಸಿನಿಮಾ ನಟ/ನಟಿ //………….

ಮೂಲ ಬಣ್ಣ ಕಪ್ಪಾಗಿದ್ದರೂ ವಿವಿಧ ಬಣ್ಣಗಳಾಗಿ ಬದಲಾಗುತ್ತದೆ. ಮನಸ್ಸು ಗೊಂದಲಮಯ .ಹೃದಯ ಕೃತಕ. ಈಗ 25 ವರ್ಷ. ಆಯಸ್ಸು ಗ್ಯಾರಂಟಿ ಕೊಡಲಾಗುವುದಿಲ್ಲ.

6) ಸೈನಿಕ //………….

ಆತ್ಮ ಬಿಳಿಯಾಗಿದೆ. ಮನಸ್ಸು ಸದೃಡ. ಹೃದಯ ಕಲ್ಲಿನಂತೆ. ಬುದ್ಧಿ ಕಡಿಮೆ. ವಯಸ್ಸು 27 .ಆಯಸ್ಸು ಗ್ಯಾರಂಟಿ ಕೊಡಲಾಗುವುದಿಲ್ಲ.

7) ಸಾಹಿತಿ //……………..

ಆತ್ಮ ಕಪ್ಪು ಬಿಳುಪು, ಮನಸ್ಸು ಸ್ವಾರ್ಥ ಅಹಂಕಾರ ಭ್ರಮೆಗಳ ಸಮ್ಮಿಲನ. ಹೃದಯ ಮೃದು. ವಯಸ್ಸು 60. ಇನ್ನೂ 20 ವರ್ಷ ಗ್ಯಾರಂಟಿ.

8) ಸರ್ಕಾರಿ ಅಧಿಕಾರಿ/ಕಾರಿಣಿ //…….

ಆತ್ಮ ಕಪ್ಪು ಮನಸ್ಸು ಧನದಾಹಿ. ಹೃದಯ
ಕಠಿಣ. ವಯಸ್ಸು 30.ಇನ್ನೂ 30 ವರ್ಷ ಗ್ಯಾರಂಟಿ.

9) ಉದ್ಯಮಿ (ಗಂ/ಹೆ) //………

ಆತ್ಮ ಕಪ್ಪು ಬಿಳುಪು, ಮನಸ್ಸು ಗೊಂದಲ ದುರಾಸೆ.
ಹೃದಯ ಸಾಧಾರಣ. ವಯಸ್ಸು 40. ಆಯಸ್ಸು ಗ್ಯಾರಂಟಿ ಇಲ್ಲ.

10) ಯುವ ಪ್ರೇಮಿ.(ಗಂ/ಹೆ). //…….

ಆತ್ಮ ಕಾಮನಬಿಲ್ಲು. ಮನಸ್ಸು ಮರ್ಕಟ. ಹೃದಯ ತುಂಬಾ ಮೃದು. ಈಗ 20 ವರ್ಷ ವಯಸ್ಸು. ಆಯಸ್ಸು ಗ್ಯಾರಂಟಿ ಇಲ್ಲ.

ಇದಲ್ಲದೆ ವಿಶೇಷ Stock clearance sales.

ಬಡವರು, ಭಿಕ್ಷುಕರು, ವೇಶ್ಯೆಯರು, ಕೂಲಿ ಕಾರ್ಮಿಕರು, ಬಡ ರೈತರು, ಅನಾಥರ ಆತ್ಮ ಮನಸ್ಸು ಹೃದಯಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಲಾಗುತ್ತದೆ. ಕೆಲವು ಉಚಿತ ಆಫರ್ ಗಳು ಇವೆ.
ಇಂದೇ ಬೇಟಿ ಕೊಡಿ.Stock ಇರುವವರೆಗೆ ಮಾತ್ರ ಮಾರಾಟ.

ವಿಳಾಸ :
ನಿಮ್ಮದೇ ಅಂತರಾಳ.
ಬೆಲೆ ;
ನೀವೇ ನಿಗದಿಮಾಡಿಕೊಳ್ಳಿ.

ವಿವೇಕಾನಂದ. ಹೆಚ್.ಕೆ.

Copyright © All rights reserved Newsnap | Newsever by AF themes.
error: Content is protected !!