March 16, 2026

Newsnap Kannada

The World at your finger tips!

nimbe hannu

ರಾಯಚೂರಿನಲ್ಲಿ ಮೂಗಿಗೆ ನಿಂಬೆಹಣ್ಣಿನ ರಸ ಹಾಕಿಕೊಂಡ ಶಿಕ್ಷಕ ಸಾವು ?

Spread the love

ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದ ಸಲಹೆಯಿಂದ ಪ್ರೇರಣೆಗೊಂಡು ರಾಯಚೂರಿನ ಶಿಕ್ಷಕರೊಬ್ಬರು ಮೂಗಿನಲ್ಲಿ ನಿಂಬೆ ಹಣ್ಣಿನ ಮೂರು- ಮೂರು ಹನಿ ರಸ ಹಾಕಿಕೊಂಡ ಕೊರೊನಾ ವೈರಸ್‌ ವಕ್ಕರಿಸೋಲ್ಲ ಎಂದು ಭಾವಿಸಿ ಕೊನೆಗೆ ಆರೋಗ್ಯದಲ್ಲಿ ಏರುಪೇರಾಗಿ ಬುಧವಾರ ಮೃತಪಟ್ಟಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರಿನ ನಟರಾಜ ಕಾಲನಿಯಲ್ಲಿ ಈ ಘಟನೆ ನಡೆದಿದ್ದು, ನಗರದ ಶರಣಬಸವೇಶ್ವರ ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ (43) ಮೃತ ಪಟ್ಟವರು.

ಆರೋಗ್ಯವಾಗಿಯೇ ಇದ್ದ ವರ್ಷದ ಬಸವರಾಜ, ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂಚೂರು ಆತಂಕಗೊಂಡಿದ್ದರು. ಮೂಗಿಗೆ ನಿಂಬೆ ರಸ ಹಾಕಿಕೊಂಡ್ರೆ ಕೊರೊನಾ ಬರುವುದಿಲ್ಲ ಅಂತಾ ಭಾವಿಸಿ, ಬೆಳಗ್ಗೆ ಮೂಗಿಗೆ ನಿಂಬೆರಸ ಹಾಕಿಕೊಂಡ ನಂತರ ಒದ್ದಾಡಿ ಮೃತಪಟ್ಟಿದ್ದಾರೆ.

error: Content is protected !!