ನದಿದಡದಲ್ಲಿ ನೀರು ಕುಡಿಯುತ್ತಿದ್ದ ೧೨ ವರ್ಷದ ಬಾಲಕನನ್ನು ಮೊಸಳೆ ಎಳೆದೊಯ್ದ ದಾರುಣ ಘಟನೆ ರಾಯಚೂರು ತಾಲೂಕು ಡೊಂಗರಾಂಪುರ ಬಳಿಯ ಕೃಷ್ಣ ನದಿಯಲ್ಲಿ ಬುಧವಾರ ನಡೆದಿದೆ.
ಬಾಲಕ ಮಲ್ಲಿಕಾರ್ಜುನ ತನ್ನ ಐವರು ಗೆಳೆಯರ ಜತೆ ದನಮೇಯಿಸಲು ಮಧ್ಯಾಹ್ನ ಸುಮಾರು ೨ ರ ಸಮಯದಲ್ಲಿ ಹೋಗಿದ್ದು, ನೀರು ಕುಡಿಯುತ್ತಿದ್ದ ಈ ಬಾಲಕನನ್ನು ಮೊಸಳೆ ಎಳೆದುಕೊಂಡು ಹೋದ ವಿಷಯ ಬಾಲಕರಿಂದ ಗ್ರಾಮಸ್ಥರಿಗೆ ತಿಳಿಯಿತು.
ಎರಡು ತೆಪ್ಪದಲ್ಲಿ ಸ್ಥಳೀಯ ಮೀನುಗಾರರು ನಾಪತ್ತೆಯಾದ ಮಲ್ಲಿಕಾರ್ಜುನನನ್ನು ಹುಡುಕಾಡಿದರು ಪತ್ತೆಯಾಗಲಿಲ್ಲ. ರಾತ್ರಿಯಾದ ಕಾರಣ ಹುಡುಕುವ ಕಾರ್ಯ ಸ್ಥಗಿತಗೊಂಡಿದ್ದು, ಗುರುವಾರ ಬೆಳಗ್ಗೆಯಿಂದ ಕಾರ್ಯಾಚರಣೆ ಮುಂದುವರಿಯಲಿದೆ. ನದಿಯ ತಗ್ಗುಪ್ರದೇಶಗಳಲ್ಲಿ ಹೆಚ್ಚಾಗಿ ನೀರು ನಿಂತಿದ್ದು, ಈ ಭಾಗಗಳಲ್ಲಿ ಮೊಸಳೆಗಳ ಕಾಟ ವಿಪರೀತವಾಗಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
- ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
- ಬ್ಯಾಂಕ್ ಆಫ್ ಬರೋಡಾ: 1267 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ