November 19, 2024

Newsnap Kannada

The World at your finger tips!

kw g

ಆರ್ಥಿಕ ಸಂಕಷ್ಟದಲ್ಲಿರುವ ಪತ್ರಕರ್ತರಿಗೂ ನೆರವು ನೀಡಲು ಕೆಯುಡಬ್ಲ್ಯೂಜೆ ಮನವಿಗೆ ಮುಖ್ಯಮಂತ್ರಿ ಸ್ಪಂದನೆ

Spread the love

ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ತಮಿಳುನಾಡಿನ ಮಾದರಿ ಪರಿಹಾರ ನೀಡಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಒತ್ತಾಯಿಸಿದ್ದು, ಸಿಎಂ ಯಡಿಯೂರಪ್ಪ ಪರಿಶೀಲನೆ ಮಾಡುವ ಭರವಸೆ ನೀಡಿದ್ದಾರೆ.

ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದ ನಿಯೋಗ ಸಿಎಂ ಭೇಟಿ ಮಾಡಿ ಮನವಿ ಅರ್ಪಿಸಿದ ಸಂದರ್ಭದಲ್ಲಿ ಈ ಭರವಸೆ ನೀಡಿದರು.

ಕೋವಿಡ್ ಲಾಕ್ ಡೌನ್ ಕಾರಣದಿಂದಾಗಿ ಮಾಧ್ಯಮಗಳು ಸಂಕಷ್ಟದಲ್ಲಿ ಸಿಲುಕಿದ್ದು, ಇದೇ ವೃತ್ತಿ ಅವಲಂಬಿಸಿರುವ ಹಲವು ಪತ್ರಕರ್ತರ ಬದುಕು ಕೂಡ ಅಯೋಮಯವಾಗಿದೆ. ಗ್ರಾಮೀಣ ಪತ್ರಕರ್ತರ ಪರಿಸ್ಥಿತಿ ಕೂಡ ಬಹಳ ಕಷ್ಟದಲ್ಲಿದೆ ಎನ್ನುವುದನ್ನು ಸಿಎಂಗೆ‌ ಮನವರಿಕೆ ಮಾಡಲಾಗಿದೆ.

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ, ಪತ್ರಕರ್ತರಿಗೆ (ತಮಿಳುನಾಡಿನಲ್ಲಿ ತಲಾ 5 ಸಾವಿರ ನೀಡಿದ ಮಾದರಿಯಲ್ಲಿ) ಹಲವು ರಾಜ್ಯಗಳಲ್ಲಿ ನೆರವು ನೀಡಲಾಗಿದೆ. ಅದೇ ರೀತಿ ರಾಜ್ಯದಲ್ಲಿಯೂ ತಲಾ 10 ಸಾವಿರ ನೆರವು ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ನಿಯೋಗದಲ್ಲಿ ಹಿರಿಯ ಪತ್ರಕರ್ತರಾದ ವಿ.ನಂಜುಂಡಪ್ಪ, ನಾಗರಾಜ್ ಗಡೇಕಲ್ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ನಾಗರಾಜ್ ಅವರಿಗೆ ಚಿಕಿತ್ಸೆ ಭಾಗವಾಗಿ ಒಂದು ಲಕ್ಷ ರೂ ನೆರವನ್ನು ಮುಖ್ಯಮಂತ್ರಿ ಮಂಜೂರು ಮಾಡಿದರು.

ಅಭಿನಂದನೆ:
ಕೆಯುಡಬ್ಲ್ಯೂಜೆ ಮನವಿ ಮೇರೆಗೆ ಪತ್ರಕರ್ತರನ್ನು ಫ್ರಂಟ್ ಲೈನ್ ವಾರಿಯರ್ಸ್‌ ಎಂದು ಘೋಷಣೆ ಮಾಡಿ ಆದ್ಯತೆ ಮೇರೆಗೆ ಉಚಿತವಾಗಿ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡಿದ್ದಕ್ಕಾಗಿ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.

Copyright © All rights reserved Newsnap | Newsever by AF themes.
error: Content is protected !!