January 8, 2025

Newsnap Kannada

The World at your finger tips!

car burn

ರಸ್ತೆಯ ಮಧ್ಯದಲ್ಲೇ ಸುಟ್ಟು ಕರಕಲಾದ ಶಶಿಕಲಾ ಬೆಂಬಲಿಗರ ಕಾರುಗಳು

Spread the love

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಸೋಮವಾರ ತಮಿಳುನಾಡಿಗೆ ಪ್ರಯಾಣಿಸುತ್ತಿದ್ದ ವೇಳೆ ಶಶಿಕಲಾ ಸ್ವಾಗತಕ್ಕೆ ಕಾಯುತ್ತಿದ್ದ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡು ಎರಡು ಕಾರುಗಳು ಸುಟ್ಟು ಕರಕಲಾಗಿದೆ.

ಕೃಷ್ಣಗಿರಿ ಸಮೀಪದ ಟೋಲ್ ಗೇಟ್ ಬಳಿಯಲ್ಲಿ ಶಶಿಕಲಾ ನಟರಾಜನ್ ಸ್ವಾಗತಕ್ಕೆ ಸಿದ್ದತೆಯನ್ನು ಮಾಡಿಕೊಳ್ಳಲಾಗಿತ್ತು.

ಬೆಂಗಳೂರಿನಿಂದ ಶಶಿಕಲಾ ನಟರಾಜನ್ ತಮಿಳುನಾಡಿನತ್ತ ಪ್ರಯಾಣಿಸುತ್ತಿದ್ದಾರೆ. ಈ ವೇಳೆಯಲ್ಲಿ ಪಟಾಕಿ ತುಂಬಿಸಿಟ್ಟಿದ್ದ ಎರಡು ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡಿತು. ರಸ್ತೆಯಲ್ಲಿಯೇ ಕಾರುಗಳು ಸುಟ್ಟು ಕರಕಲಾಗಿವೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂಧಿ ಭೇಟಿ ನೀಡಿ ಬೆಂಕಿಯನ್ನು ನಂದಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಕಾರಿನಲ್ಲಿ ಪಟಾಕಿಯನ್ನು ತುಂಬಿಸಿಟ್ಟಿರುವುದೇ ಘಟನೆಗೆ ಕಾರಣವೆನ್ನಲಾಗುತ್ತಿದೆ. ಯಾವುದೇ ಪ್ರಾಣಾಪಾಯ ಕಂಡು ಬಂದಿಲ್ಲ

Copyright © All rights reserved Newsnap | Newsever by AF themes.
error: Content is protected !!