February 22, 2026

Newsnap Kannada

The World at your finger tips!

22 bus

22 ಮಂದಿ ಪ್ರಯಾಣಿಕರಿದ್ದ ಬಸ್ ಗೆ ಬೆಂಕಿ ಸಂಪೂಣ೯ ಭಸ್ಮ- ಯಾವುದೇ ಪ್ರಾಣಾಪಾಯವಿಲ್ಲ

Spread the love

ಚಲಿಸುತ್ತಿದ್ದ ಖಾಸಗಿ ಬಸ್ಸಿಗೆ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾದ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಜೋಡಕೆರೆ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.

ಮುಂಬೈನಿಂದ ಮಂಗಳೂರು ಕಡೆ ರಾಷ್ಟೀಯ ಹೆದ್ದಾರಿ 63ರ ಮೂಲಕ ಬಸ್ ಸಂಚರಿಸುತ್ತಿದ್ದ ಈ ಬಸ್ ನಲ್ಲಿ
22 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.

ಈ ವೇಳೆ ಬಸ್ಸಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ತಗಲಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಜರಾಗಿ ಬೆಂಕಿ ನಂದಿಸಿದ್ದು ಘಟನೆ ಯಲ್ಲಾಪುರ ಠಾಣಾ ಪ್ಯಾಪ್ತಿಯಲ್ಲಿ ನಡೆದಿದೆ 20 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

error: Content is protected !!