ವಧುಗೆ, ವರನ ಗೆಳೆಯರು ಡ್ಯಾನ್ಸ್ ಮಾಡುವಂತೆ ಒತ್ತಾಯ ಮಾಡಿದರು. ವಧು ಗಲಾಟೆ ಮಾಡಿ ಮದುವೆ ಒಲ್ಲೆ ಎಂದು ಹಠ ಮಾಡಿದಳು.
ಮದುವೆ ಮುನ್ನಾ ದಿನ ಅಥವಾ ಮದುವೆ ದಿನವೇ ಹಾಡು ಡ್ಯಾನ್ಸ್ ಈಗ ಕಾಮನ್ ಆಗಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ
ಮದುವೆ ದಿನ ವಧುಗೆ ವರನ ಗೆಳೆಯರು ಡ್ಯಾನ್ಸ್ ಮಾಡುವಂತೆ ಬೆಳೆದು ಕೊಂಡು ಬಂದ ಪರಿಣಾಮ ಮದುವೆ ಮುರಿದು ಬಿದ್ದಿದೆ.
ಹಿಂದಿ ಚಲನಚಿತ್ರ ಗೀತೆ ಹಾಕಿಕೊಂಡು ವರ ಗೆಳೆಯರ ಗುಂಪು ಡ್ಯಾನ್ಸ್ ಮಾಡ್ತಾ ಇತ್ತು. ಆಗ ವರನನ್ನು ಕರೆದುಕೊಂಡು ಬಂದು ಡ್ಯಾನ್ಸ್ ಮಾಡಿಸಲು ಮುಂದಾದರು ಗೆಳೆಯರು. ಕೂಡಲೇ ವಧು ಕೂಡಾ ಡ್ಯಾನ್ಸ್ ಮಾಡುವಂತೆ ಒತ್ತಾಯಿಸಿದರು. ಆಕೆ ನಾನು ಬರಲ್ಲ ಎಂದಾಗ ವರನ ಗೆಳೆಯರು ಎತ್ತಿಕೊಂಡು ಹೋಗಿ ಡ್ಯಾನ್ಸ್ ಮಾಡುವಂತೆ ಒತ್ತಾಯ ಮಾಡಿದಾಗ ವಧುಗೆ ಪಿತ್ತ ನೆತ್ತಿಗೆ ಏರಿತು. ಕೋಪದಿಂದ ಹಾಕಿಕೊಂಡ ಹಾರ ಕಿತ್ತು ಬೀಸಾಕಿ ಮದುವೆ ಬೇಡ ಎಂದು ಗಲಾಟೆ ಮಾಡಿದಳು. ಆಕೆಯ ಪೋಷಕರು ಎಷ್ಟೇ ಹೇಳಿದರೂ ನಂಗೆ ಮದುವೆ ಎಂದು ಪಟ್ಟು ಹಿಡಿದಳು.
ವಧು ವರನ ಕುಟುಂಬದವರು ಗಲಾಟೆ ಮಾಡಿದರು. ವಿಷಯ ಪೋಲಿಸ್ ಠಾಣೆಯ ಮೆಟ್ಟಿಲು ಏರಿತು. ರಾಜಿ ಸಂಧಾನ ಮಾಡಿದರೂ ಪ್ರಯೋಜನ ಆಗಲಿಲ್ಲ. ಮದುವೆ ನಿಲ್ಲಿಸಿದರು. ಮದುವೆಗಾಗಿ ವರದಕ್ಷಿಣೆ ರೂಪದಲ್ಲಿ ಪಡೆದಿದ್ದ ಆರೂವರೆ ಲಕ್ಷ ರುಗಳನ್ನು ವರನ ಮನೆಯವರಿಂದ ವಾಪಸ್ ಕೊಡಿಸಿ. ವಧು ಹಠದಂತೆ ವಿವಾಹವನ್ನು ರದ್ದು ಮಾಡಿದರು ಪೋಲಿಸರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು