ನನ್ನ ಪತಿ, ನಟ ಚಂದನ್ ಮೇಲೆ ಆಗಿರುವ ಹಲ್ಲೆಗೆ ನಾನಂತೂ ನ್ಯಾಯ ಕೇಳುತ್ತೇನೆ. ಚಂದನ್ ಬರುತ್ತಾರೋ ಇಲ್ಲವೋ ಅದಕ್ಕಾಗಿ ನಾನು ಕಾಯುವುದಿಲ್ಲ. ನನ್ನ ಪತಿ ಮೇಲಿನ ಹಲ್ಲೆ ಎನ್ನುವುದಕ್ಕಿಂತ, ಒಬ್ಬ ಕಲಾವಿದನ ಮೇಲೆ ಆಗಿರುವ ಹಲ್ಲೆಗೆ ನಾನಂತೂ ನ್ಯಾಯ ಕೇಳುತ್ತೇನೆ ಎಂದು ನಟಿ, ಚಂದನ್ ಪತ್ನಿ ಕವಿತಾ ಗೌಡ ಹೇಳಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಕವಿತಾ ನಂಗೆ ಈ ವಿಷಯ ನಿನ್ನೆಯಷ್ಟೇ ನನಗೆ ತಿಳಿಯಿತು ಎಂದಿದ್ದಾರೆ.
ನಾನು ಯಾರಿಗೂ ಹೊಡೆದಿಲ್ಲ. ಚಿಕ್ಕ ಹುಡುಗನ ಮೇಲೆ ಕೈ ಮಾಡುವವನೂ ನಾನಲ್ಲ. ಆ ಹುಡುಗನನ್ನು ಎಡಗೈಯಿಂದ ಜಸ್ಟ್ ತಟ್ಟಿದೆ. ಅದನ್ನೇ ಹೊಡೆದರು ಅಂತ ಹೇಳ್ತಿದ್ದಾರೆ ಎಂದು ಚಂದನ್ ನನಗೆ ಹೇಳಿದರು.
10 ವರ್ಷದಿಂದ ಇರುವ ನಟನನ್ನು ಅವರು ಹಾಗೆ ಟ್ರೀಟ್ ಮಾಡಿದ್ದು ಸರಿ ಅಲ್ಲ. ಮೊದಲು ಅಲ್ಲಿ ಮೂರು ಜನ ಮಾತ್ರ ಇದ್ರಂತೆ. ಆಮೇಲೆ ಎಲ್ಲರನ್ನೂ ಕರೆಸಿ ಗಲಾಟೆ ಮಾಡಿದ್ದಾರೆ. ಇದು ಸರಿಯಾದ ಕ್ರಮವಲ್ಲ’ ಎಂದರು
ಯಾರೂ ಅಲ್ಲ ಸಂಯಮ ತಗೆದುಕೊಂಡಿಲ್ಲ. ಕೆಟ್ಟದ್ದಾಗಿಯೇ ಮಾತನಾಡುತ್ತಾ ಕೇಳೋ ಸಾರಿ ಕೇಳೋ ಅಂತ ಟ್ರೀಟ್ ಮಾಡಿದ್ದಾರೆ. ಆ ವಿಡಿಯೋ ನೋಡಿ ನನಗಂತೂ ಬೇಸರವಾಯಿತು. ಕೆಲವರು ಕನ್ನಡದವರೂ ಅಲ್ಲಿದ್ದರು. ಅವರು ಯಾರೂ ಸಹಾಯಕ್ಕೆ ಬಂದಿಲ್ಲ. ನಾನೂ ತೆಲುಗು ಸೀರಿಯಲ್ ನಲ್ಲಿ ಆಕ್ಟ್ ಮಾಡಿದ್ದೀನಿ. ಆದರೆ, ಇಂತಹ ಘಟನೆಯನ್ನು ಯಾವತ್ತೂ ಕಂಡಿಲ್ಲ ಎನ್ನುವುದು ಕವಿತಾ ಗೌಡರ ಮಾತುಗಳು.
- ಪೆಟ್ರೋಲ್ GST ವ್ಯಾಪ್ತಿಗೆ ಸೇರಿಸುವ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಹತ್ವದ ಸ್ಪಷ್ಟನೆ
- ಐಶ್ವರ್ಯಗೌಡ ವಂಚನೆ ಪ್ರಕರಣ: ಶಾಸಕ ನರೇಂದ್ರಸ್ವಾಮಿಯ ಕೈವಾಡ ಶಂಕೆ, ಅನ್ನದಾನಿಯ ಗಂಭೀರ ಆರೋಪ
- ಹೊಸ ವರ್ಷದ ಸಂಭ್ರಮ: KSBCLನಿಂದ ಒಂದೇ ದಿನ 308 ಕೋಟಿ ರೂ. ಮದ್ಯ ಮಾರಾಟ
- 12 ರಾಶಿಗಳ 2025ರ ವಾರ್ಷಿಕ ಭವಿಷ್ಯ
- ಅಂಗನವಾಡಿಗೆ ತೆರಳಿದ್ದ 3 ವರ್ಷದ ಬಾಲಕಿಗೆ ಹಾವು ಕಚ್ಚಿ ದಾರುಣ ಸಾವು
More Stories
ಪೆಟ್ರೋಲ್ GST ವ್ಯಾಪ್ತಿಗೆ ಸೇರಿಸುವ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಹತ್ವದ ಸ್ಪಷ್ಟನೆ
ಐಶ್ವರ್ಯಗೌಡ ವಂಚನೆ ಪ್ರಕರಣ: ಶಾಸಕ ನರೇಂದ್ರಸ್ವಾಮಿಯ ಕೈವಾಡ ಶಂಕೆ, ಅನ್ನದಾನಿಯ ಗಂಭೀರ ಆರೋಪ
ಹೊಸ ವರ್ಷದ ಸಂಭ್ರಮ: KSBCLನಿಂದ ಒಂದೇ ದಿನ 308 ಕೋಟಿ ರೂ. ಮದ್ಯ ಮಾರಾಟ