December 19, 2024

Newsnap Kannada

The World at your finger tips!

school , learning , teaching

ಆ. 23 ರಿಂದ 9-10ನೇ ತರಗತಿ ಶಾಲೆ ಆರಂಭ – ಸಿಎಂ‌ ಬೊಮ್ಮಾಯಿ

Spread the love

ಆಗಸ್ಟ್​​​ 23ರಿಂದ. 9-10 ನೇ ತರಗತಿ ಯ ಶಾಲೆಗಳನ್ನು ಆರಂಭಿಸಲು ನಿರ್ಧಾರ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೋವಿಡ್ ಸಂಬಂಧ ಸಿಎಂ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಬೊಮ್ಮಾಯಿ ಎರಡು ಹಂತದಲ್ಲಿ ಶಾಲೆ ಆರಂಭಿಸಲು ಸರ್ಕಾರ ನಿರ್ಧಾರ ಮಾಡಿದೆ.

23ನೇ ತಾರೀಕಿನಿಂದ 9 ಹಾಗೂ 10ನೇ ತರಗತಿಗಳು ಆರಂಭ ಆಗಲಿದೆ ಎಂದು ತಿಳಿಸಿದರು.

9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ದಿನ ಬಿಟ್ಟು ದಿನ ಕ್ಲಾಸ್ ನಡೆಯಲಿದೆ. ತಿಂಗಳಾಂತ್ಯಕ್ಕೆ 8ನೇ ತರಗತಿವರೆಗೆ ಶಾಲೆ ತೆರೆಯೋ ಬಗ್ಗೆ ನಿರ್ಧಾರ ಮಾಡಿದ್ದೇವೆ.

ಕೋವಿಡ್​ ತೀವ್ರತೆ ಹೇಗಿರುತ್ತೆ ಅನ್ನೋ ಆಧಾರದಲ್ಲಿ ಈ ರೀತಿಯ ನಿರ್ಧಾರ ಎಂದು ಬೊಮ್ಮಾಯಿ ತಿಳಿಸಿದರು.

Copyright © All rights reserved Newsnap | Newsever by AF themes.
error: Content is protected !!