ಕೊರೋನಾ ಹಿನ್ನಲೆಯಲ್ಲಿ ಸದ್ಯ ಶಾಲಾ-ಕಾಲೇಜ್ಗಳು ಆನ್ಲೈನ್ ಶಿಕ್ಷಣದ ಮೊರೆಹೋಗಿವೆ. ಈ ಆನ್ಲೈನ್ ಕಲಿಕೆಯು ಮಕ್ಕಳ ಸಂಪೂರ್ಣ ಕಲಿಕೆಗೆ ಸಹಾಯವಾಗುತ್ತಿಲ್ಲ. ಅಲ್ಲದೇ ನೆಟ್ವರ್ಕ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿಂದ ಬೋಧನೆ ಮತ್ತು ಹಾಜರಾತಿ ಸಮಸ್ಯೆ ಕೂಡ ಮೂಡಿದೆ. ಹೀಗಾಗಿ ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯಹೊರೆಯಾಗುತ್ತಿದೆ, ಅವುಗಳನ್ನು ತಪ್ಪಿಸುವ ಸಲುವಾಗಿ ಸರ್ಕಾರ ಪಠ್ಯ ಕಡಿತಗೊಳಿಸಲು ಮುಂದಾಗಿದೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಪಿಯು ಮಂಡಳಿಯ ಶೇ. 30ರಷ್ಟು ಪಠ್ಯವನ್ನು ಕಡಿತಗೊಳಿಸಿರುವುದಾಗಿ ಇಲಾಖೆಯ ವೆಬ್ಸೈಟ್ನಲ್ಲಿ ಮಾಹಿತಿ ಹೇಳಲಾಗಿದೆ.
ಪಠ್ಯಗಳನ್ನು ಕಡಿತಗೊಳಿಸುವ ಕುರಿತು ಪಠ್ಯ ಪುಸ್ತಕ ರಚನಾ ಸಮಿತಿ ಮತ್ತು ಪರಿಷ್ಕರಣಾ ಸಮಿತಿಯ ಸದಸ್ಯರು ವರದಿ ನೀಡಿದ್ದು ಅದರ ಅನುಸರವಾಗಿ ಕ್ರಮ ಕೈಗೊಳ್ಳಲಾಗಿದೆ.
ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೀವ ವಿಜ್ಞಾನ, ಗಣಿತ ಶಾಸ್ತ್ರ ಹೊರತುಪಡಿಸಿ ಇತರೆ 33 ವಿಷಯಗಳಲ್ಲಿ ಶೇ.30ರಷ್ಟು ಪಠ್ಯ ಕಡಿತಗೊಳಿಸಲಾಗಿದೆ. ಇದು ಕೇಲವ 2020–21ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗಲಿದೆ.
ವಿಜ್ಞಾನ ವಿಷಯವನ್ನು ಸಿಬಿಎಸ್ಸಿ ಅಳವಡಿಕೆಯಂತೆ ಯಥಾವತ್ ಮುಂದುವರೆಸಲಾಗಿದೆ. ಇತರ ಒಟ್ಟು 34 ವಿಷಯಗಳಲ್ಲಿ ಈ ಕಡಿತ ಮಾಡಲಾಗಿದೆ. ಇನ್ನು ಕರ್ನಾಟಕ ಸಂಗೀತ ವಿಷಯಕ್ಕೆ ಕಳೆದ 2 ವರ್ಷಗಳಲ್ಲಿ ಯಾವುದೇ ವಿದ್ಯಾರ್ಥಿ ದಾಖಲಾಗಿಲ್ಲ. ಹೀಗಾಗಿ ಆ ವಿಷಯ ಪಠ್ಯಕಡಿತ ಪ್ರಕ್ರಿಯೆಯಿಂದ ಕೈ ಬಿಡಲು ನಿರ್ಧಾರ ಮಾಡಲಾಗಿದೆ.
ಈಗಾಗಲೇ ಕೇಂದ್ರ ಸರ್ಕಾರ 1ರಿಂದ 12ನೇ ತರಗತಿವರೆಗೆ ಶೇ.30ರಷ್ಟು ಪಠ್ಯ ಕಡಿತಗೊಳಿಸಿತ್ತು. ರಾಜ್ಯದಲ್ಲಿ ಕೂಡ ಇದೀಗ ಪಿಯು ವಿದ್ಯಾರ್ಥಿಗಳಿಗೆ ಪಠ್ಯ ಕಡಿಮೆ ಮಾಡಿ ಸರ್ಕಾರ ಆದೇಶ ನೀಡಿದೆ.
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು