ಐಪಿಎಲ್ 20-20ಯ 25 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಸನ್‌ರೈಸರ್ಸ್ ಆಫ್ ಹೈದರಾಬಾದ್‌ನ ವಿರುದ್ಧ ವಿಜಯ ಸಾಧಿಸಿತು.
ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಎಸ್‌ಆರ್‌ಹೆಚ್ ಬ್ಯಾಟಿಂಗ್ ಆಯ್ದುಕೊಂಡಿತು. ಎಸ್‌ಆರ್‌ಹೆಚ್ ಪರ ಬ್ಯಾಟಿಂಗ್ ಆರಂಭ ಮಾಡಿದ ನಾಯಕ ಡಿ. ವಾರ್ನರ್ ಹಾಗೂ ಉಪನಾಯಕ ಜೆ. ಬೇರ್ಸ್ಟೋವ್ ಸಾಧಾರಣ ಆರಂಭ ನೀಡಿದರು. ಬೇರ್ಸ್ಟೋವ್ 19 ಬಾಲ್‌ಗಳಿಗೆ 16 ರನ್ ಗಳಿಸಿ ಕಾರ್ತಿಕ್ ತ್ಯಾಗಿ ಅವರ ಬೌಲಿಂಗ್‌ನಲ್ಲಿ ವಿಕೆಟ್ ನೀಡಿದರು. ನಂತರ ಬಂದ ಮನೀಶ್ ಪಾಂಡೆ ವಾರ್ನರ್ ಅವರಿಗೆ ಉತ್ತಮ ಜೊತೆ ನೀಡಿದರು. ವಾರ್ನರ್ 38 ಬಾಲ್‌ಗಳಿಗೆ 48 ರನ್ ಗಳಿಸಿದರೆ, ಪಾಂಡೆ 44 ಬಾಲ್‌ಗಳಿಗೆ 54 ರನ್ ಗಳಿಸಿದರು. ನಂತರ ಬಂದವರದ್ದು ಸಾಮಾನ್ಯ ಆಟ. ಎಸ್‌ಆರ್‌ಹೆಚ್ ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು.
ಆರ್‌ಆರ್ ಪರ ಮೈದಾನಕ್ಕಿಳಿದ ಸ್ಟೋಕ್ಸ್ (5 ರನ್) ಹಾಗೂ ಬಟ್ಲರ್ (16 ರನ್) ಆಟ ಬಹಳ ನಿರಾಸೆ ಮೂಡಿಸಿತು. ನಂತರ ಬಂದ ಸ್ಯಾಮ್ಸನ್ ಹಾಗೂ ಪರಾಗ್ ಅವರ ಬ್ಯಾಟಿಂಗ್ ತಂಡಕ್ಕೆ ದೊಡ್ಡ ಆಸರೆಯಾಯಿತು. ಸ್ಯಾಮ್ಸನ್ 25 ಎಸೆತಗಳಿಗೆ 26 ರನ್ ಗಳಿಸಿದರೆ, ಪರಾಗ್ 25 ಬಾಲ್‌ಗಳಿಗೆ 36 ರನ್ ಗಳಿಸಿದರು. ಆದರೆ ತಂಡ ಸೋಲುವ ಹಂತದಲ್ಲಿದ್ದಾಗ ಅಕ್ಷರಶಃ ಗೆಲುವನ್ನು ತೋರಿಸಿದ್ದು ತೇವಾಟಿಯಾ. ತೇವಾಟಿಯಾ ಅವರು 28 ಬಾಲ್‌ಗಳಲ್ಲಿ 45 ರನ್‌ಗಳ ಮಿಂಚಿನಾಟ ಆಡಿದರು. ಆರ್‌ಆರ್ ತಂಡ 19.5 ಓವರ್‌ಗಳಲ್ಲಿ 5ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿ ಪಂದ್ಯದಲ್ಲಿ ವಿಜಯಿಯಾಯಿತು.
More Stories
ವಕ್ಫ್ ಆಸ್ತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜ್ಯಾದ್ಯಂತ ಡಿ. 31 ರಿಂದ ಸಾರಿಗೆ ನೌಕರರ ಮುಷ್ಕರ
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಂ-ಮೈ ಎಕ್ಸ್ಪ್ರೆಸ್ವೇ ಸಂಚಾರ ಮಾರ್ಗದಲ್ಲಿ ಬದಲಾವಣೆ