December 23, 2024

Newsnap Kannada

The World at your finger tips!

accident

ಕ್ಲಾಸ್​ಗೆ ಬಂಕ್ ಹಾಕಿ ಮೋಜು-ಮಸ್ತಿಗೆ ತೆರಳಿದ್ದ ವಿದ್ಯಾರ್ಥಿಗಳ ಕಾರು ಭೀಕರ ಅಪಘಾತ

Spread the love

ಕ್ಲಾಸ್​ಗೆ ಬಂಕ್ ಹಾಕಿ ಮೋಜು-ಮಸ್ತಿಗೆ ತೆರಳಿದ್ದ ವಿದ್ಯಾರ್ಥಿಗಳ ಕಾರು ನಿಯಂತ್ರಣ ತಪ್ಪಿ ಕೆರೆಗೆ ಹಾರಿದ ಘಟನೆ ಆನೇಕಲ್​ನ ಚಿನ್ನಯ್ಯನಪಾಳ್ಯದಲ್ಲಿ ನಡೆದಿದೆ.

ಇಲ್ಲಿನ ಭುಜಂಗ ದಾಸಯ್ಯನ ಕೆರೆಗೆ ಕಾರು ಹೋಗಿ ಬಿದ್ದಿದೆ. ಕಾರಿನಲ್ಲಿದ್ದ 7 ಜನರಲ್ಲಿ 5 ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದು ಇನ್ನಿಬ್ಬರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಹುಲ್ಲಹಳ್ಳಿಯ ಕ್ರೈಸ್ಟ್ ಕಾಲೇಜಿನ ಡಿಗ್ರಿ ವಿದ್ಯಾರ್ಥಿಗಳ ಕಾರು ಅಪಘಾತಕ್ಕೆ ಒಳಗಾಗಿದೆ.

ಕಾಲೇಜಿಗೆ ರಜೆ ಹಾಕಿ ಮೋಜು-ಮಸ್ತಿ ಮಾಡಲು ಹೋಗಿದ್ದರು ಎನ್ನಲಾಗಿದೆ. ಅತಿವೇಗವಾಗಿ ಕಾರು ಚಲಾಯಿಸಿರೋದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಅಲ್ಲದೇ ಪಾನಮತ್ತರಾಗಿ ಕಾರನ್ನ ಚಲಾಯಿಸುತ್ತಿದ್ದರು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಇದನ್ನು ಓದಿ – ಕರ್ನಾಟಕದಲ್ಲಿ ಯುವತಿಯರಿಗೆ ನೌಕರಿ ಬೇಕು ಅಂದರೆ ಮಂಚ‌ ಹತ್ತಬೇಕು: ಪ್ರಿಯಾಂಕ್ ಖರ್ಗೆ

ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜೆಸಿಬಿ ಸಹಾಯದಿಂದ ಕಾರನ್ನು ಮೇಲಕ್ಕೆ ಎತ್ತಲಾಗಿದೆ.

Copyright © All rights reserved Newsnap | Newsever by AF themes.
error: Content is protected !!