January 28, 2026

Newsnap Kannada

The World at your finger tips!

police 1

ಕಾರು- ಟ್ರಕ್ ನಡುವೆ ಭೀಕರ ಅಪಘಾತ – 6 ಮಂದಿ ದಾರುಣ ಸಾವು

Spread the love

ಹಾಸನ : ಕಾರು ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿದ ಘಟನೆ ಹಾಸನ ಹೊರವಲಯದ ಈಚನಹಳ್ಳಿ ಬಳಿ ನಡೆದಿದೆ.

ಇಬ್ಬರು ಮಹಿಳೆಯರು, ಮೂರು ಪುರುಷರು ಹಾಗೂ ಒಂದು ಮಗು ಸೇರಿ ಆರು ಜನ ಸಾವನ್ನಪ್ಪಿದ್ದಾರೆ.

ಮೃತರು ಚಿಕ್ಕಬಳ್ಳಾಪುರ ಮೂಲದವರಾಗಿದ್ದು, ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ನೋಡಲು ಕುಟುಂಬ ಸಮೇತರಾಗಿ ತೆರಳಿದ್ದರು. ಅಲ್ಲಿಂದ ವಾಪಸ್ ಊರಿಗೆ ಮರಳುವಾಗ ನಿದ್ರೆ ಮಂಪರಿನಲ್ಲಿ ಭೀಕರ ಅಪಘಾತ ಸಂಭವಿಸಿದೆ

ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ, ಚೇತನ್ ಹಾಗೂ ರಾಕೇಶ್ ಘಟನೆಯಲ್ಲಿ ದಾರುಣ ಸಾವನ್ನಪ್ಪಿದ್ದಾರೆ.ಭೀಕರ ಅಗ್ನಿ ಅವಘಡದಿಂದ 22 ಮಂದಿ ಸಜೀವ ದಹನ

ಮೃತರು ಹೊಸಕೋಟೆ ತಾಲೂಕಿನ ಅಂದರಹಳ್ಳಿ ಹಾಗೂ ದೇವನಹಳ್ಳಿ ಬಳಿಯ ಕಾರಹಳ್ಳಿ ಮೂಲದವರು ಎಂದು ತಿಳಿದು ಬಂದಿದೆ. ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಹಾರಿ ಕಂಟೇನರ್‌ಗೆ ಗುದ್ದಿದ ಪರಿಣಾಮ ಘಟನೆ ಸಂಭವಿಸಿದೆ

error: Content is protected !!