April 17, 2025

Newsnap Kannada

The World at your finger tips!

temperature

ರಾಜ್ಯದಲ್ಲಿ ತಾಪಮಾನ ಏರಿಕೆ: ಬಿಸಿಲಿನ ತೀವ್ರತೆ ಹೆಚ್ಚಳ, ಹವಾಮಾನ ಇಲಾಖೆಯ ಮುನ್ಸೂಚನೆ

Spread the love

ಬೆಂಗಳೂರು: ಬಿಸಿಲಿನ ತೀವ್ರತೆಗೆ ತತ್ತರಿಸಿರುವ ರಾಜ್ಯದ ಜನತೆಗೆ ಹವಮಾನ ಇಲಾಖೆ ಮತ್ತೊಂದು ಮುನ್ಸೂಚನೆ ನೀಡಿದ್ದು, ಈ ವಾರ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಫೆಬ್ರವರಿಯಲ್ಲಿಯೇ ಕೆಲವು ಜಿಲ್ಲೆಗಳಲ್ಲಿ 30-35 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದ್ದು, ಜನರು ಬಿಸಿಲಿನ ಬೇಗೆಯಿಂದ ಪರದಾಡುತ್ತಿದ್ದಾರೆ.

ಬಿಸಿಲಿನ ಝಳ ಹೆಚ್ಚಳವಾಗುವ ಜಿಲ್ಲೆಗಳು:
ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ರಾಯಚೂರು, ವಿಜಯಪುರ, ಕೊಪ್ಪಳ, ಯಾದಗಿರಿ, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಹವಾಮಾನ ಬದಲಾವಣೆಯಾಗಲಿದ್ದು, ತಾಪಮಾನ ಏರಿಕೆಯಾಗಲಿದೆ.

ಬಿಸಿಲಿನ ತೀವ್ರತೆಯಿಂದ ರಕ್ಷಣೆಗಾಗಿ ಮುನ್ನೆಚ್ಚರಿಕೆ ಕ್ರಮಗಳು:

  • ಮಧ್ಯಾಹ್ನ 12:00 ರಿಂದ 3:00 ಗಂಟೆಯವರೆಗೆ ಬಿಸಿಲಿಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು.
  • ಪ್ರಯಾಣಿಸುವಾಗ ನೀರಿನ ಬಾಟಲಿ ಜೊತೆಗೆ ಇಡುವುದು.
  • ನಿರ್ಜಲೀಕರಣ ತಪ್ಪಿಸಲು ಸಾಕಷ್ಟು ನೀರು ಕುಡಿಯುವುದು.
  • ಹಗುರವಾದ, ತೆಳುವಾದ, ಹತ್ತಿ ಬಟ್ಟೆ ಧರಿಸುವುದು.
  • ಬಿಸಿಲಿನ ಸಂಧರ್ಭದಲ್ಲಿ ಕನ್ನಡಕಗಳು, ಛತ್ರಿ, ಟೋಪಿ, ಬೂಟು ಅಥವಾ ಚಪ್ಪಲಿ ಬಳಸುವುದು.
  • ಬಹಳಷ್ಟು ಬಿಸಿ ಆಹಾರ ಸೇವನೆ ತಪ್ಪಿಸುವುದು.
  • ಬಿಸಿ ಹವಾಮಾನದಲ್ಲಿ ಶ್ರಮದಾಯಕ ಚಟುವಟಿಕೆಗಳನ್ನು ಸಾಧ್ಯವಾದಷ್ಟು ನಿರಾಕರಿಸುವುದು.
  • ತಣ್ಣೀರಿನ ಸ್ನಾನ ಮಾಡುವ ಮೂಲಕ ಶರೀರವನ್ನು ತಂಪಾಗಿರಿಸುವುದು.
  • ಮಜ್ಜಿಗೆ, ನಿಂಬೆ ನೀರು, ORS, ಎಲೆಕ್ಟ್ರೋಲೈಟ್ ಪಾನೀಯಗಳನ್ನು ಸೇವಿಸುವುದು.
  • ಅಲ್ಕೋಹಾಲ್, ಕಾಫಿ, ಚಹಾ ಮತ್ತು ಕಾರ್ಬೊನೇಟೆಡ್ ಪಾನೀಯಗಳನ್ನು ತಪ್ಪಿಸುವುದು.
  • ಸಾಕುಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ, ಅವುಗಳಿಗೆ ಸಾಕಷ್ಟು ನೀರು ಒದಗಿಸುವುದು.
  • ಮನೆ ಮತ್ತು ಕೊಠಡಿಗಳನ್ನು ತಂಪಾಗಿಡಲು ಪರದೆ, ಶಟರ್ ಅಥವಾ ಸನ್‌ಶೇಡ್ ಬಳಸುವುದು.

ಇದನ್ನು ಓದಿ –ಮೆಟ್ರೋ ದರ ಏರಿಕೆ: ಪ್ರಯಾಣಿಕರ ಸಂಖ್ಯೆ ಕುಸಿತ, ಬಿಎಂಟಿಸಿ ಪ್ರಯಾಣಿಕರು ಹೆಚ್ಚಳ

ತೀವ್ರ ಬಿಸಿಲಿನ ನಡುವೆಯೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ.

Copyright © All rights reserved Newsnap | Newsever by AF themes.
error: Content is protected !!