ಸ್ಯಾಂಡಲ್ ವುಡ್ ನಟಿ ಅನುಷಾ ರೈ ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ ಟೆಕ್ಕಿಯೊಬ್ಬನನ್ನು ಬೆಂಗಳೂರಿನ ಅನ್ನಪೂಣೇ೯ಶ್ವರಿನಗರ ಪೋಲಿಸರು ಬಂಧಿಸಿದ್ದಾರೆ.
ಚಂದನ್ ಎಂಬಾತನೇ ಬಂಧಿತ ಪಾಗಲ್ ಪ್ರೇಮಿ. ನಟಿ ಅನುಷಾಗೆ ತನ್ನನ್ನು ಪ್ರೀತಿಸು ಎಂದು ಬೆನ್ನ ಹಿಂದೆ ಬಿದ್ದಿದ್ದ. ಇಷ್ಟ ಇಲ್ಲದೇ ಇದ್ದರೂ ಈ ನಟಿಯ ಹಿಂದೆ ಬಿದ್ದು ಒತ್ತಡ ಹಾಕುತ್ತಿದ್ದ ಎನ್ನಲಾಗಿದೆ.
ಕಾಲೇಜು ಓದುತ್ತಾ ಇದ್ದಾಗಿನಿಂದ ಪ್ರೀತಿಸುವಂತೆ ಪೀಡಿಸುತ್ತಾ ಇದ್ದ ಚಂದನ್ ಕಾಲೇಜು ದಿನಗಳಿಂದ ಪರಿಚಯ ಆಗಿದ್ದ ಇಬ್ಬರು ಎರಡು ಮೂರು ತಿಂಗಳು ಇಬ್ಬರೂ ಒಟ್ಟಿಗೆ ಓಡಾಡಿದ್ದರು.
ನಂತರ ಲವ್ ಮಾಡಲು ಇಷ್ಟವಿಲ್ಲದೆ ಬ್ರೇಕ್ ಅಪ್ ಆಗಿತ್ತು. ಇದರಿಂದ ಚಂದನ್ ಕೋಪಗೊಂಡಿದ್ದ. ಪ್ರಿಯಕರನ ಕಾಟ ತಾಳಲಾರದೆ ನಟಿ ಅನುಷಾ ಮನೆ ಬದಲಾಯಿಸಿದ್ದರು.
ಬೆಂಗಳೂರಿನ ನಾಗರಬಾವಿಯಲ್ಲಿ ವಾಸವಾಗಿದ್ದ ನಟಿ ಅನುಷಾ ಮನೆಗೆ ಬಂದು ಧಮ್ಕಿ ಹಾಕಿದ್ದ. ನನ್ನನ್ನು ಪ್ರೀತಿ ಮಾಡಬೇಕು ಇಲ್ಲದೆ ಹೋದರೆ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದ.
ತನ್ನ ಸ್ನೇಹಿತೆ ಮನೆಗೆ ಹೋಗಲು ಕ್ಯಾಬ್ ನಲ್ಲಿ ತೆರಳುತ್ತಿದ್ದ ನಟಿಯನ್ನು ಅಡ್ಡ ಹಾಕಿ ಹಲ್ಲೆ ಮಾಡಿದ್ದ ಎನ್ನುವ ಆರೋಪವೂ ಇದೆ. ಕಾರಿನ ಒಳಹೊಕ್ಕು ಹಲ್ಲೆ ಮಾಡಿದ್ದರ ಪರಿಣಾಮ ನಟಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ದೂರು ನೀಡಿದ್ದು ಪಾಗಲ್ ಪ್ರೇಮಿಯನ್ನು ಬಂಧಿಸಲಾಗಿದೆ.
- ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
- 2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
- 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ
- HMPV ವೈರಸ್ ಕರ್ನಾಟಕಕ್ಕೆ ಪ್ರವೇಶ: ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಸೋಂಕು ದೃಢ
- ಮಳೆ ನಿಂತರೂ ಮರದ ಹನಿ ನಿಲ್ಲದು
More Stories
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ