ಶಿಕ್ಷಕ ವೃತ್ತಿಗೆ ಶ್ರೇಷ್ಠವಾದ ಗೌರವ ವಿದೆ, ಘನತೆ ಇದೆ, ಭವಿಷ್ಯದ ಜನಾಂಗವನ್ನು ನಿರ್ಮಾಣ ಮಾಡುವ , ಅವರ ವ್ಯಕ್ತಿತ್ವ ವನ್ನು ಕಟ್ಟಿಕೊಡುವ ಶಿಕ್ಷಕರು ಸಮಾಜದ ಶಿಲ್ಪಿಗಳು ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇಗೌಡ ಭಾನುವಾರ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಧಾಕೃಷ್ಣನ್ ರವರು ಸೆಪ್ಟೆಂಬರ್ 5 ರಂದು ಜನಿಸಿ ತಮ್ಮ ವೃತ್ತಿಜೀವನವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿ,ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಬಹುದೊಡ್ಡ ಹೆಸರನ್ನು ಗಳಿಸಿದ್ದಾರೆ ಎಂದರು.
ಈ ದೇಶದ ಅತ್ಯುನ್ನತ ಹುದ್ದೆ ರಾಷ್ಟಪತಿ ಹುದ್ದೆಯನ್ನು ಗಳಿಸಿದ ಒಬ್ಬ ಶಿಕ್ಷಕರು ರಾಧಾಕೃಷ್ಣನ್ ಆಗಿದ್ದಾರೆ ಎಂದರು.
ನಾನು ಹುಟ್ಟಿದ ದಿನವನ್ನು ಶಿಕ್ಷಕ ದಿನಾಚರಣೆಯನ್ನಾಗಿಸಿದ ಮಹಾಚೇತನಾ ರಾಧಾಕೃಷ್ಣನ್ ರವರು ಎಂದರು.
ಒಬ್ಬ ಶಿಕ್ಷಕ ಜಗತ್ತಿನಲ್ಲಿ ಏನೆಲ್ಲಾ ಆಗಬಹುದು ಎಂಬುವುದಕ್ಕೆ ರಾಧಾಕೃಷ್ಣನ್ ರವರು ಬಹು ದೊಡ್ಡ ಉದಾಹರಣೆ ಎಂದರು.
ಶಿಕ್ಷಕ ಹುದ್ದೆಗೆ ಬಹುದೊಡ್ಡ ಗೌರವವಿದೆ, ಶಿಕ್ಷಕರು ಪ್ರಸುತ್ತ ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ನಿರ್ವಹಿಸಿ ಮಾದರಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಹೊಸ ಶಿಕ್ಷಣ ನೀತಿ ಉತ್ತಮವಾಗಿದ್ದು, ಉತ್ತಮ ಶಿಕ್ಷಣವನ್ನು ನೀಡುವ ಜವಾಬ್ದಾರಿ ಯನ್ನು ಸರ್ಕಾರ ಮಾಡುತ್ತಿದೆ ಎಂದರು.
ಕಸ್ತೂರಿ ರಂಗನ್ ಕೊಟ್ಟ ಹೊಸ ಶಿಕ್ಷಣ ನೀತಿ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ ಎಂದರು.
ಹೊಸ ಶಿಕ್ಷಣ ನೀತಿ ಮೂಲಕ ಶಾಲೆಯ ಸರ್ವಾಂಗೀಣ ಬೆಳೆವಣಿಗೆಯಾಗಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.
ಶಿಕ್ಷಕರು ತಮ್ಮ ಕಲಿಕೆಯಿಂದಾಗಿ, ನಿಮ್ಮ ವೃತ್ತಿಯಿಂದಾಗಿ ಸಮಾಜದಲ್ಲಿ ನೀವು ಯಾವಾಗಲೂ ಚಿರಸ್ಥಾಯಿಯಾಗಿರುತ್ತೀರಿ ಎಂದರು.
ಈ ಮೂಲಕ ರಾಧಾಕೃಷ್ಣನ್ ರವರ ತತ್ವ ಆದರ್ಶಗಳನ್ನು ಮೈಗೂಡಿಸಿ ಕೊಂಡು ಬದುಕೋಣ ಎಂದರು.
ನಂತರ ಮಾತನಾಡಿದ ಜಿ.ಪಂ ಸಿ ಇ.ಒ ದಿವ್ಯಪ್ರಭು ಸರ್ಕಾರದ ಕೆಲಸ ದೇವರ ಕೆಲಸ ಅಂತಾ ಹೇಳುತ್ತಾರೆ, ಆದರೆ ದೇವರನ್ನು , ಜಗತ್ತನ್ನು, ಬದುಕನ್ನು ತೋರಿಸುವ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ ಎಂದರು.
ನಾವು ಇಂದು ಏನೇ ಸಾಧನೆ ಮಾಡಿದ್ದರು ಅದಕ್ಕೆಲ್ಲಾ ಕಾರಣ ಶಿಕ್ಷಕರು ಎಂದು ಹೇಳಬಹುದು, ಈ ಮೂಲಕ ಶಿಕ್ಷಕರು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂದರು.
ವಿಶ್ವವನ್ನೇ ತನ್ನ ಆಳ್ವಿಕೆಗೆ ತಂದ ಅಲೆಗ್ಸಾಂಡರ್ ಗೆ ಒಂದು ಪ್ರಶ್ನೆ ಕೇಳಿದಾಗ ನನಗೆ ಜನ್ಮ ನೀಡಿದ್ದು ನಮ್ಮ ತಂದೆ ತಾಯಿ ಆದರೆ ಇಡೀ ವಿಶ್ವ ನನ್ನ ಕೈಗೆ ಬಂದಿರುವುದಕ್ಕೆ ಕಾರಣ ನನ್ನ ಗುರುಗಳು ಎಂದು ಹೇಳುತ್ತಾರೆ ಈ ಸನ್ನಿವೇಶವೇ ಹೇಳುತ್ತದೆ ಶಿಕ್ಷಕರ ಪ್ರಾಮುಖ್ಯತೆಯನ್ನು ಎಂದರು.
ರಾಧಾಕೃಷ್ಣನ್ ರವರು ರಾಷ್ಟ್ರಪತಿಯಾಗಿದ್ದಾಗ ನಿಮ್ಮ ಜೀವನದ ವಿಶೇಷ ದಿನ ಯಾವುದು ಎಂದು ಕೇಳುತ್ತಾರೆ, ಆಗ ಅವರು ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ಸಾರೋಟಿನಲ್ಲಿ ರೈಲ್ವೆ ನಿಲ್ದಾಣದವರೆಗೆ ಕರೆದುಕೊಂಡು ಹೋದ ಘಟನೆಯನ್ನು ನನ್ನ ಜೀವನದ ವಿಶೇಷದಿನ ಎಂದು ಹೇಳುತ್ತಾರೆ ಎಂದರು.
ಈ ಮೂಲಕ ದೇಶದ ಸದೃಢ ಮಕ್ಕಳ ಭವಿಷ್ಯವನ್ನು ನಿರ್ಮಾಣ ಮಾಡಲು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸ್, ಮುಡಾ ಅಧ್ಯಕ್ಷ ಶ್ರೀನಿವಾಸ್ , ಡಿಡಿಪಿಐ ಜವರೇಗೌಡ, ಇಒ ಚಂದ್ರಶೇಖರ್, ಬಿಇಓ ಚಂದ್ರಕಾಂತ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
- ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್
- ಕೊಡಗಿನಲ್ಲಿ ನಿರ್ಮಾಣಗೊಳ್ಳಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
- KSRTC ಬಸ್-ಲಾರಿ ನಡುವೆ ಡಿಕ್ಕಿ: ಐವರು ಸ್ಥಳದಲ್ಲೇ ಸಾವು
- ವರದಕ್ಷಿಣೆ ಕಿರುಕುಳ ತಾಳಲಾರದೇ ಮಹಿಳೆ ಆತ್ಮಹತ್ಯೆ – ಪತಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ
- ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
More Stories
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ
ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ