ಭಾರತದ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತೊಂದು ದೈತ್ಯ ಮಾಹಿತಿ ತಂತ್ರಜ್ಞಾನ ಕಂಪನಿಯಾದ ಆ್ಯಕ್ಸೆಂಚರ್‌ನ್ನು ಹಿಂದಿಕ್ಕಿದೆ.
ಹೌದು, ರಿಲೈಯನ್ಸ್ ಇಂಡಸ್ಟ್ರೀಸ್ ನಂತರ 10 ಲಕ್ಷ ಕೋಟಿ ವಹಿವಾಟನ್ನು ಮಾಡಿದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಭಾರತದ ಎರಡನೇ ಅತೀ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ.
ಅಕ್ಟೋಬರ್ 8 ರಂದು ಬಿಡುಗಡೆಯಾದ ವಹಿವಾಟಿನ ಪಟ್ಟಿಯ ಪ್ರಕಾರ ಟಿಸಿಎಸ್‌ನ ಮಾರುಕಟ್ಟೆ ಮೌಲ್ಯವು 144.7 ಬಿಲಿಯನ್ ಡಾಲರ್‌ಗಳಷ್ಟಿದ್ದರೆ, ಆ್ಯಕ್ಸೆಂಚರ್‌ನ ಮಾರುಕಟ್ಟೆ ಮೌಲ್ಯ 143.1 ಬಿಲಿಯನ್ ಡಾಲರ್‌ಗಳಷ್ಟಿದೆ.
ಬಂಡವಾಳೀಕರಣ ವಿಷಯದಲ್ಲಿ ರಿಲೈಯನ್ಸ್‌ನ ಮಾರುಕಟ್ಟೆ ನಂತರ ಸ್ಥಾನದಲ್ಲಿರುವ ಟಿಸಿಎಸ್‌ನ ಒಟ್ಟು ಮಾರುಕಟ್ಟೆ ಬಂಡವಾಳ 215 ಯುಎಸ್ ಡಾಲರ್‌ಗಳಷ್ಟಿದೆ.
ಟಿಸಿಎಸ್, ಸೆಪ್ಟೆಂಬರ್ 2020 ರ ತ್ರೈಮಾಸಿಕ ಅಂತ್ಯದ ವೇಳೆಗೆ ಎಲ್ಲಾ ತೆರಿಗೆಗಳನ್ನು ಕಳೆದು ಒಟ್ಟು 7,475 ಕೋಟಿ ರೂಪಾಯಿಗಳ ಲಾಭವನ್ನು ಗಳಿಕೆ ಮಾಡಿದೆ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ