ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಐತಿಹಾಸಿಕ ಪಂಚತಾರಾ ಹೋಟೆಲ್ ಲಲಿತ ಮಹಲ್ ಪ್ಯಾಲೇಸ್ ನ ನಿರ್ವಹಣೆಯನ್ನು ಟಾಟಾ ಒಡೆತನದ ಮುಂಬಯಿ ಮೂಲದ ತಾಜ್ ಹೋಟೆಲ್‌ಗೆ ವಹಿಸಿಕೊಡುವ ಪ್ರಯತ್ನ ಮುಂದುವರೆದಿದೆ.
ಲಲಿತ ಮಹಲ್ ಪ್ಯಾಲೇಸ್ ಕಟ್ಟಡದ ಜವಾಬ್ದಾರಿಯನ್ನು ಕೇಂದ್ರ ಸಚಿವರಾಗಿದ್ದ ದಿ. ಎನ್. ಅನಂತ ಕುಮಾರ್ ಅವರು ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸುಪರ್ದಿಯಿಂದ ರಾಜ್ಯ ಸರ್ಕಾರದ ವಶಕ್ಕೆ ನೀಡುವಂತೆ ನೋಡಿಕೊಂಡಿದ್ದರು. ನಂತರದ ದಿನಗಳಲ್ಲಿ ಇದನ್ನು ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆಗೆ ವಹಿಸಿತ್ತು. 2017ರಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್‌ಗೆ ವಹಿಸಲಾಯಿತು.
ಇದನ್ನು ಓದಿ – 2023-2027ರ ಆವೃತ್ತಿಯ IPL ಮಾಧ್ಯಮ ಹಕ್ಕು 43,050 ಕೋಟಿ ರೂ.ಗೆ ಮಾರಾಟ
ಜೂ. 14 ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಂಪುಟ ಉಪ ಸಮಿತಿಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಎಲ್ಲರ ಸಹಮತದಿಂದ ಅನುಮತಿ ದೊರೆತರೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ಪಂಚತಾರಾ ಹೋಟೆಲ್ ಲಲಿತ ಮಹಲ್ ಪ್ಯಾಲೇಸ್ ಖಾಸಗಿ ಒಡೆತನಕ್ಕೆ ಸೇರಲಿದೆ.
ರಾಜಮಹಾರಾಜರ ಕಾಲದ ವೈಭವ, ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ಲಲಿತ ಮಹಲ್ ಪ್ಯಾಲೇಸ್ನಲ್ಲಿ ಕಾಲ ಕಳೆಯುವುದೇ ರೋಮಾಂಚನಕಾರಿ ಅನುಭವ. ಈ ಹೋಟೆಲ್‌ಗೆ ವಿದೇಶಿ ಪ್ರವಾಸಿಗರೇ ಹೆಚ್ಚಾಗಿ ಬರುತ್ತಾರೆ. ಬೇಸಿಗೆ, ದಸರಾ ಮತ್ತು ವಾರಾಂತ್ಯದಲ್ಲಿ ಹೋಟೆಲ್ ತುಂಬಿರುತ್ತದೆ. ಉಳಿದ ದಿನಗಳಲ್ಲೂ ಬಹುತೇಕ ಭರ್ತಿಯಾಗಿರುತ್ತದೆ. ಗತಕಾಲದ ವೈಭವ ಹೊಂದಿರುವ ‘ಲಲಿತ ಮಹಲ್ ಪ್ಯಾಲೇಸ್ನೋಡಲು ವಿಶೇಷ.
ಲಲಿತ ಮಹಲ್ ಪ್ಯಾಲೇಸ್ಗೂ ಭಾರತೀಯ ಚಿತ್ರರಂಗಕ್ಕೂ ಎಲ್ಲಿಲ್ಲದ ನಂಟು. ಬಹುತೇಕ ಭಾರತೀಯ ಭಾಷೆಗಳ ಸಿನಿಮಾ ಚಿತ್ರೀಕರಣ ಇಲ್ಲಿ ನಡೆದಿದೆ. ಲಲಿತ ಮಹಲ್ನಲ್ಲಿ ಚಿತ್ರೀಕರಣ ನಡೆಸುವುದೆಂದರೆ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಖುಷಿಯ ವಿಚಾರ ಮತ್ತು ಪ್ರತಿಷ್ಠೆಯ ಸಂಗತಿ. ಈವರೆಗೆ 650ಕ್ಕೂ ಹೆಚ್ಚು ಸಿನಿಮಾಗಳು ಚಿತ್ರೀಕರಣಗೊಂಡಿರುವುದು ಇಲ್ಲಿನ ವಿಶೇಷ. ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್ ಅವರ ಬಹುತೇಕ ಸಿನಿಮಾಗಳ ಚಿತ್ರೀಕರಣ ಇಲ್ಲಿಯೇ ನಡೆದಿದೆ.
- ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
- ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
ಥೈಲ್ಯಾಂಡ್ ನಲ್ಲಿ ಹುಡುಗಿಯರ ಮೇಲೆ ಹಣದ ಕಂತೆ ಎಸೆದು ಮೋಜು ಮಸ್ತಿ ಮಾಡಿದ ಮನ್ಮಿತ್ ರೈ
ಹುಟ್ಟುಹಬ್ಬದ ಪಾರ್ಟಿಗೆಂದು ಮನ್ಮಿತ್ ರೈ ಭಾರತದಿಂದ ಥೈಲ್ಯಾಂಡ್ಗೆ ತನ್ನ ಸ್ನೇಹಿತರನ್ನು ಕರೆಸಿಕೊಂಡು ಭರ್ಜರಿ ಮೋಜು ಮಸ್ತಿ ಮಾಡಿ ಹುಡುಗಿಯರ ಮೇಎ ನೋಟಿನ ಕಂತೆ ಎಸೆದ ವಿಡಿಯೋ ವೈರಲ್ ಆಗಿದೆ
ಮನ್ಮಿತ್ ರೈ ಮುತ್ತಪ್ಪಾ ರೈ ಸಂಬಂಧಿ. ಈ ಹಿಂದೆ ಗುಣ ರಂಜನ್ ಮತ್ತು ಮನ್ಮಿತ್ ಒಟ್ಟಿಗೆ ಇದ್ದರು. ಬಳಿಕೆ ಬೇರೆ ಬೇರೆಯಾಗಿದ್ದಾರೆ. ಸದ್ಯ ಮನ್ಮಿತ್ ರೈ ವಿರುದ್ಧ ಕೊಲೆಗೆ ಸಂಚು ರೂಪಿಸಿರುವ ಆರೋಪ ಕೇಳಿಬಂದಿದ್ದು. ಜಯಕರ್ನಾಟಕ ಸಂಘಟನೆ ಗೃಹ ಸಚಿವ ಆರಗ ಜ್ಞಾನೇಂದ್ರಗೆ ದೂರು ನೀಡಿದ್ದಾರೆ
ಈ ಆರೋಪದ ಬಗ್ಗೆ ಮಾತನಾಡಿರುವ ಮನ್ಮಿತ್ ರೈ, ಇದು ಎಷ್ಟು ಸತ್ಯ ಎಂಬುವುದನ್ನು ಪೊಲೀಸರು ತನಿಖೆ ಮಾಡುತ್ತಾರೆ. ಆದ್ರೆ ಈ ವಿಚಾರದಲ್ಲಿ ನನ್ನ ಹೆಸರು ಏಕೆ ಬರುತ್ತಿದೆಯೋ ಗೊತ್ತಿಲ್ಲ. ನಾನು ವ್ಯವಹಾರದ ಕಾರಣ ವಿದೇಶಕ್ಕೆ ಬಂದಿದ್ದೇನೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಮೇಲೆ ಇದುವೆರಗೂ ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲ. ಯಾವ ಸ್ಟೇಷನ್ನಲ್ಲೂ ಎಫ್‌ಐಆರ್ ದಾಖಲಾಗಿಲ್ಲ. ಯಾವುದೇ ಅಪರಾಧ ಪ್ರಕರಣಗಳಿಲ್ಲದಿದ್ದರೂ ಯಾಕೆ ನನ್ನ ವಿರುದ್ದ ಆರೋಪ ಬರುತ್ತಿದೆ ಗೊತ್ತಿಲ್ಲ ಎಂದಿದ್ದಾರೆ.
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು