ಭಾರತದ ಅತಿದೊಡ್ಡ ಕೈಗಾರಿಕಾ ಸಮೂಹ ಟಾಟಾ ಸನ್ಸ್‌ನ (Tata Son’s) ಚೇರ್ಮನ್ ಆಗಿದ್ದ ರತನ್ ಟಾಟಾ, ತೀವ್ರ ಅನಾರೋಗ್ಯಕ್ಕೆ ಒಳಗಾಗಿ, ಎರಡು ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು.
ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ, 86 ವರ್ಷದ ರತನ್ ಟಾಟಾ (Ratan Tata) ಅವರು ಮೃತಪಟ್ಟಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಇಂದು ಸಂಜೆ ತೀವ್ರ ಅನಾರೋಗ್ಯದ ಕಾರಣದಿಂದ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದನ್ನು ಓದಿ – ರತನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ, ಐಸಿಯುವಿನಲ್ಲಿ ಚಿಕಿತ್ಸೆ
1991ರಲ್ಲಿ ಟಾಟಾ ಸನ್ಸ್‌ನ ಚೇರ್ಮನ್ ಹುದ್ದೆಯನ್ನು ಸ್ವೀಕರಿಸಿದ ರತನ್ ಟಾಟಾ, 2012ರವರೆಗೆ ಈ ಸ್ಥಾನದಲ್ಲಿ ಸೇವೆ ಸಲ್ಲಿಸಿದ್ದರು. 1996ರಲ್ಲಿ ಟಾಟಾ ಟೆಲಿಸರ್ವೀಸಸ್ ಸ್ಥಾಪಿಸಿದ್ದರೆ, 2004ರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಅನ್ನು ಸಾರ್ವಜನಿಕ ಪಾಲುದಾರ ಸಂಸ್ಥೆಯನ್ನಾಗಿ ಮಾಡಿದ ಸಾಧನೆ ಅವರದು. ಟಾಟಾ ಸನ್ಸ್‌ನಿಂದ ನಿವೃತ್ತಿಯಾದ ಬಳಿಕ, ಅವರಿಗೆ ಟಾಟಾ ಸನ್ಸ್, ಟಾಟಾ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಮತ್ತು ಟಾಟಾ ಕೆಮಿಕಲ್ಸ್‌ನ ಗೌರವಾಧ್ಯಕ್ಷ ಪಟ್ಟ ನೀಡಲಾಯಿತು. ಇದನ್ನು ಓದಿ – ದಸರಾ ನಂತರ ಸಿಎಂ ಬದಲಾವಣೆ ಖಚಿತ: ಬಿ.ವೈ. ವಿಜಯೇಂದ್ರ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ